Pages

ಶಿಕ್ಷಕರ ಒಡಲು

ಕಥಾ ಗುಚ್ಚ

ಕಥೆ ಎಂದರೆ ಬರಹದ ಅಥವಾ ಮಾತಿನ ಶಬ್ದಗಳ ಸರಣಿಯಲ್ಲಿ, ಅಥವಾ ಅಚಲ ಅಥವಾ ಚಲಿಸುವ ಚಿತ್ರಗಳ ಮೂಲಕ, ಅಥವಾ ಎರಡರ ಮೂಲಕ ತೋರಿಸಲಾದ, ಸಂಬಂಧಿತ ವಾಸ್ತವಿಕ ಅಥವಾ ಕಾಲ್ಪನಿಕ ಘಟನೆಗಳ ಒಂದು ವರದಿ.

ಕಥೆಯನ್ನು ಅನೇಕ ವಿಷಯಾಧಾರಿತ ಅಥವಾ ವಿಧ್ಯುಕ್ತ ವರ್ಗಗಳಲ್ಲಿ ಸಂಯೋಜಿಸಬಹುದು: ಅಕಲ್ಪಿತ ಸಾಹಿತ್ಯ (ಉದಾಹರಣೆಗೆ ಸೃಜನಾತ್ಮಕ ಅಕಲ್ಪಿತ ಸಾಹಿತ್ಯ, ಜೀವನ ಚರಿತ್ರೆ, ಪತ್ರಿಕೋದ್ಯೋಗ, ಪ್ರತಿಲಿಪಿ ಕವನ, ಮತ್ತು ಇತಿಹಾಸ ಲೇಖನ); ಐತಿಹಾಸಿಕ ಘಟನೆಗಳ ಕಾಲ್ಪನಿಕೀಕರಣ (ಉದಾಹರಣೆಗೆ ದಂತಕಥೆ, ಕಲ್ಪಿತ ಕಥೆ, ಪುರಾಣ ಕಥೆ, ಮತ್ತು ಐತಿಹಾಸಿಕ ಕಲ್ಪಿತ ಸಾಹಿತ್ಯ); ಮತ್ತು ಕಟ್ಟುನಿಟ್ಟಾದ ಅರ್ಥದ ಕಲ್ಪಿತ ಸಾಹಿತ್ಯ (ಉದಾಹರಣೆಗೆ ಗದ್ಯ ಮತ್ತು ಕೆಲವೊಮ್ಮೆ ಕವನದಲ್ಲಿನ ಸಾಹಿತ್ಯ, ಉದಾಹರಣೆಗೆ ಸಣ್ಣಕಥೆಗಳು, ಕಾದಂಬರಿಗಳು, ಮತ್ತು ವಿವರಣಾತ್ಮಕ ಕವಿತೆ ಮತ್ತು ಹಾಡುಗಳು, ಮತ್ತು ಇತರ ಪಠ್ಯ ರೂಪಗಳು, ಆಟಗಳು, ಅಥವಾ ನೇರ ಅಥವಾ ಮುದ್ರಿತ ಪ್ರದರ್ಶನಗಳಲ್ಲಿ ಚಿತ್ರಿಸಲ್ಪಟ್ಟ ಕಾಲ್ಪನಿಕ ಕಥನಗಳು).

ಕಥೆಯು ಭಾಷಣ, ಸಾಹಿತ್ಯ, ನಾಟಕ, ಸಂಗೀತ ಮತ್ತು ಹಾಡು, ಕಾಮಿಕ್ಸ್, ಪತ್ರಿಕೋದ್ಯಮ, ಸಿನಿಮಾ, ದೂರದರ್ಶನ ಮತ್ತು ವೀಡಿಯೊ, ವೀಡಿಯೋ ಗೇಮ್‍ಗಳು, ರೇಡಿಯೋ, ಅರಚನಾತ್ಮಕ ವಿನೋದ, ಮತ್ತು ಪ್ರದರ್ಶನ, ಜೊತೆಗೆ ಕೆಲವು ಚಿತ್ರಕಲೆ, ಶಿಲ್ಪಕಲೆ, ರೇಖಾಚಿತ್ರ ರಚನೆ, ಛಾಯಾಗ್ರಹಣ ಮತ್ತು ಇತರ ದೃಶ್ಯ ಕಲೆಗಳು ಸೇರಿದಂತೆ ಎಲ್ಲ ಬಗೆಯ ಮಾನವ ಸೃಜನಶೀಲತೆ, ಕಲೆ, ಮತ್ತು ಮನೋರಂಜನೆಯಲ್ಲಿ ಕಂಡುಬರುತ್ತದೆ. ಆದರೆ ಒಟ್ಟಿನಲ್ಲಿ ಘಟನೆಗಳ ಸರಣಿ ಪ್ರದರ್ಶಿಸಲ್ಪಡಬೇಕು.
ಮೌಖಿಕ ಕಥಾ ನಿರೂಪಣೆಯು ಕಥೆಗಳನ್ನು ಹಂಚಿಕೊಳ್ಳುವ ಅತ್ಯಂತ ಹಳೆಯ ವಿಧಾನವಾಗಿದೆ. ವಿಶೇಷವಾಗಿ ಸಾಂಪ್ರದಾಯಿಕ ಸ್ಥಳೀಯ ಜನರ ಮಾನವಶಾಸ್ತ್ರದಲ್ಲಿ ಅಧ್ಯಯಿನಿಸಿದಂತೆ, ಬಹುತೇಕ ಜನರ ಬಾಲ್ಯಗಳಲ್ಲಿ, ಸರಿಯಾದ ವರ್ತನೆ, ಸಾಂಸ್ಕೃತಿಕ ಇತಿಹಾಸ, ಸಾಮುದಾಯಿಕ ಗುರುತಿನ ರಚನೆ, ಮತ್ತು ಮೌಲ್ಯಗಳ ಮೇಲೆ ಮಾರ್ಗದರ್ಶನ ಮಾಡಲು ಕಥೆಗಳನ್ನು ಬಳಸಲಾಗುತ್ತದೆ.

ಕಥೆಗಳನ್ನು ಇತರ ಕಥೆಗಳ ಒಳಗೆ ಅಂತರ್ಗತೀಕರಿಸಬಹುದು, ಉದಾಹರಣೆಗೆ ವಿಶ್ವಾಸಾರ್ಹವಲ್ಲದ ನಿರೂಪಕನಿಂದ ಹೇಳಲ್ಪಟ್ಟ ಕಥೆಗಳು. ಕಥನ ಕಲೆಯ ಒಂದು ಪ್ರಮುಖ ಭಾಗವೆಂದರೆ ನಿರೂಪಣಾ ರೀತಿ. ಅಂದರೆ ಕಥೆಯನ್ನು ಹೇಳಲು ಬಳಸಲಾಗುವ ವಿಧಾನಗಳ ಸಮೂಹ.


ಮಕ್ಕಳ ಕಥೆಗಳಿಗಾಗಿ ಕೆಳಗಿನ  ಲಿಂಕುಗಳನ್ನು ಕ್ಲಿಕ್ ಮಾಡಿ:



ಮಕ್ಕಳ ಕಥೆಗಳ ಲೋಕಕ್ಕೆ ಹೋಗಲು ಇಲ್ಲಿ ಕ್ಲಿಕ್ ಮಾಡಿ:


Image result for story




ಕೃಪೆ:
 https://archive.org/details/opensource_Kannada
kanaja.in


ಸ್ಥಳೀಯರ ಕಥೆ, ಕವನ, ಲೇಖನಗಳು ಇಲ್ಲಿ ಕ್ಲಿಕ್ ಮಾಡಿ:




ಕೃಪೆ:
http://www.sugamakannada.com/articles/index.php?a=7
Copyright © www.sugamakannada.com





ಕಥೆಗಳು - ಸಣ್ಣಕಥೆ, ಕಿರುಕಥೆಗಳು ಇಲ್ಲಿ ಕ್ಲಿಕ್ ಮಾಡಿ:








ಒಟ್ಟು ೧೦೦೦ ಕಥೆಗಳನ್ನು ಹೊಂದಿರುವ ಬ್ಲಾಗ್ ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ:






No comments:

Post a Comment