Pages

ಶಿಕ್ಷಕರ ಒಡಲು

ನಲಿಕೆ ಕಲಿಕೆ

....ನಲಿಯುತ ಕಲಿಯುವ ತಾಯಿ ನುಡಿಯ ....


ಗಾದೆ ಹುಡುಕಾಟ




****************************************************************


ಗುಣಾತ್ಮಕ ಶಿಕ್ಷಣಾಧಾರಿತ ಭಾಷಾ ಚಟುವಟಿಕೆಗಳು





****************************************************************




ಸೂಚನೆ : 
ಮೊದಲ ಚೌಕದಲ್ಲಿ 9 ಅಡ್ಡಸಾಲು, ಕಂಬಸಾಲು ಮತ್ತು ಮಧ್ಯ ಚೌಕಗಳಿವೆ. ‘ಅವರ್ಗೀಯ ವ್ಯಂಜನಗಳಾದ ‘ಯ’ಯಿಂದ ‘ಳ’ ವರೆಗಿನ ಅಕ್ಷರಗಳನ್ನು ಪುನರಾವರ್ತನೆ ಆಗದಂತೆ ಆ ಚೌಕದಲ್ಲಿ ತುಂಬಿರಿ. ಇದೇ ರೀತಿ ಎರಡನೇ ಚೌಕದಲ್ಲಿ ಅಡ್ಡಸಾಲು, ಕಂಬಸಾಲು, ಮೂಲೆಯಿಂದ ಮೂಲೆಗೆ 6 ಚೌಕಗಳಿವೆ ಮಧ್ಯದಲ್ಲೂ 2 X 6 ಚೌಕವಿದೆ ‘ಹ್ರಸ್ವ ಸ್ವರಗಳು ಪುನರಾವರ್ತನೆ ಆಗದಂತೆ ತುಂಬಿರಿ.







****************************************************************


ಭಾಷಾ ಚಟುವಟಿಕೆಗಳು ಗಾದೆಗಳ ಮೂಲಕ ಭಾಷಾಕೌಶಲ

ನೂರಾರು ಮಾತುಗಳಲ್ಲಿ ಹೇಳಬಹುದಾದ ಬದುಕಿನ ಅನುಭವವು ಸಾರವತ್ತಾಗಿ, ಸಂಕ್ಷಿಪ್ತವಾಗಿ, ನೀತಿಬೋಧಕವಾಗಿರುವ ಗಾದೆಗಳು ನಿತ್ಯದ ಬದುಕಿನಲ್ಲಿ ಬಳಕೆಯಾಗುತ್ತಿವೆ. ಪ್ರತಿನಿತ್ಯ, ಪ್ರತಿಕ್ಷಣ ವೈವಿಧ್ಯಮಯವಾದ ಅನುಭವವನ್ನು ನೀಡುತ್ತಿರುವ ಚಲನಶೀಲ ಬದುಕಿನ ಪರಿಣಾಮವಾಗಿ ಹುಟ್ಟಿಕೊಂಡಿರುವ ಗಾದೆಗಳು ಅನುಭವಾಧಾರಿತವಾದ ನುಡಿಗಳಾಗಿದ್ದು ಗಹನವಾದ ಅರ್ಥ ಶ್ರೀಮಂತಿಕೆಯಿಂದ ಹೊರಹೊಮ್ಮುತ್ತವೆ. ಕೇಳುಗರ ಮನಸ್ಸಿಗೆ ಆಹ್ಲಾದಕರವನ್ನುಂಟು ಮಾಡುವುದಲ್ಲದೆ ಮನಮುಟ್ಟುವಂತೆಯೂ ಇರುತ್ತವೆ.
‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು,’ ಆಡುಮುಟ್ದ ಸೊಪ್ಪಲ್ಲ ಗಾದೆ ಹೇಳದ ವಿಷಯವಿಲ್ಲ,’ ‘ಹಸಿಗೋಡೆಯಲ್ಲಿ ಹರಳು ಮೆಟ್ಟಿದಂತೆ,’ ‘ಆಕಾರದಲ್ಲಿ ಬಿಂಧು ಅರ್ಥದಲ್ಲಿ ಸಿಂಧೂ,’ ‘ರೂಪದಲ್ಲಿ ವಾಮನ ಅರ್ಥದಲ್ಲಿ ತ್ರಿವಿಕ್ರಮ,’ ಮುಂತಾದ ಗಾದೆಯನ್ನು ಕುರಿತಾದ ಗಾದೆಗಳೇ ಗಾದೆಯ ಮಹತ್ವವನ್ನು ಎತ್ತಿ ಹಿಡಿಯುತ್ತವೆ.
ಇಂತಹ ಮಹತ್ವವುಳ್ಳ ಗಾದೆಗಳಾಧಾರಿತ ಭಾಷಾ ಚಟುವಟಿಕೆಯ ಮೂಲಕ ವಿದ್ಯಾರ್ಥಿಗಳಲ್ಲಿ ಭಾಷಾ ಕೌಶಲವನ್ನು ಹೆಚ್ಚಿಸಲು ಪ್ರಯತ್ನಿಸ ಬಹುದು. ವಿದ್ಯಾರ್ಥಿಗಳ ಸಾಮರ್ಥ್ಯಕ್ಕನುಗುಣವಾಗಿ ಗಾದೆ ಆಧಾರಿತ ಚಟುವಟಿಕೆಗಳನ್ನು ನೀಡಿ ಭಾಷಾ ಕೌಶಲ್ಯಗಳನ್ನು ಬೆಳಸಲು ಯೋಜಿಸಿರುವ ಕೆಲವು ಚಟುವಟಿಕೆಗಳನ್ನು ಇಲ್ಲಿ ನೀಡಲಾಗಿದೆ.

ಯಾವುದಾದರೂ ಒಂದು ವ್ಯಂಜನದಿಂದ ಪ್ರಾರಂಭವಾಗುವ ಗಾದೆಗಳನ್ನು ಆಯ್ಕೆ ಮಾಡಿಕೊಳ್ಳುವುದು. ಆ ಗಾದೆಗಳಲ್ಲಿ ಸಂಯುಕ್ತಾಕ್ಷರಗಳಿರದಂತೆ ಎಚ್ಚರವಹಿಸುವುದು.

ಉದಾಹರಣೆಗೆ:

1.ಕಡು, ಕೋಪ, ಕಾಯಕವೇ, ಕಾಲಿನದು, ಕಾಸಿಗೊಂದು, ಕಾಡು, ಕುಣಿಯಲಾರದವಳು, ಕುರು, ಕೋತಿ, ಖಂಡಿತ.ಕೈಲಾಸ, ಕಾಲಿಗೆ, ಕೊಸರಿಗೊಂದು ಕಿಡಿಯಿಂದ,ಕುಡಿಸಿದಂತೆ ಇತ್ಯಾದಿ.
2.ಯಾವ ವ್ಯಂಜನವನ್ನು ಆರಿಸಿಕೊಂಡಿರುತ್ತೇವೆಯೋ ಆ ವ್ಯಂಜನದಿಂದ ಆರಂಭವಾಗುವ ಗಾದೆಗಳನ್ನು ಆರಿಸಿ ಕೊಳ್ಳುವುದು. ಆರಿಸಿಕೊಂಡಿರುವ ಗಾದೆಗಳಲ್ಲಿ ಬರುವ ಇತರ ಪದಗಳನ್ನೂ ಕಲಿತಾರ್ಥಿಗಳಿಗೆ ಪರಿಚಯಿಸುವುದು
3. ಪರಿಚಯಿಸಿದ ಪದಗಳು ವಿದ್ಯಾರ್ಥಿಗಳಿಗೆ ತಪ್ಪಿಲ್ಲದೆ ಓದಲು ಮತ್ತು ಬರೆಯಲು ಬರುತ್ತದೆ ಎಂದು ದೃಢಪಡಿಸಿ ಕೊಳ್ಳುವುದು.
4. ವಿದ್ಯಾರ್ಥಿಗಳು ಕಲಿತಿರುವ ಪದಗಳನ್ನು ಒಳಗೊಂಡ ಗಾದೆ ನುಡಿಗಳ ಮಿಂಚು ಪಟ್ಟಿಯನ್ನು ಎಲ್ಲರಿಗೂ ಕಾಣುವಂತೆ ಪ್ರದರ್ಶಿಸುವುದು.


ಉದಾಹರಣೆ:

ಕಡು ಕೋಪ ಬಂದಾಗ ತಡಕೊಂಡವನೇ ಜಾಣ

ಕಾಯಕವೇ ಕೈಲಾಸ

ಕಾಲಿನದು ಕಾಲಿಗೆ; ತಲೆಯದು ತಲೆಗೆ

ಕಾಸಿಗೊಂದು,ಕೊಸರಿಗೆರಡು

ಕಿಡಿಯಿಂದ ಕಾಡು ಸುಡ ಬಹುದು

ಕುಣಿಯಲಾರದವಳು ನೆಲ ಡೊಂಕು ಅಂದಳಂತೆ

ಕುರು ಮೇಲೆ ಬರೆ ಎಳೆದ ಹಾಗೆ

ಕೋತಿಗೆ ಹೆಂಡ ಕುಡಿಸಿದಂತೆ

ಖಂಡಿತ ವಾದಿ,ಲೋಕ ವಿರೋಧಿ


5. ಪ್ರದರ್ಶಿಸಿದ ಗಾದೆಗಳನ್ನು ಗಟ್ಟಿಯಾಗಿ ಓದಿಸುವುದು.
6. ಕಪ್ಪು ಹಲಗೆಯ ಮೇಲೆ ಅದೇ ಗಾದೆಗಳನ್ನು ಬರೆದು ಎಲ್ಲರೂ ತಪ್ಪಿಲ್ಲದೆ ಬರೆದುಕೊಳ್ಳುವಂತೆ ಸೂಚಿಸುವುದು.
7. ತಾವೇ ಬರೆದುಕೊಂಡಿರುವ ಗಾದೆಗಳನ್ನು ಮನಸ್ಸಿನಲ್ಲಿ ಓದಿ ಅರ್ಥಮಾಡಿಕೊಳ್ಳುವಂತೆ ಸೂಚಿಸುವುದು.
8. ವಿದ್ಯಾರ್ಥಿಗಳು ಬರೆದು ಕೊಂಡಿರುವ ಗಾದೆಗಳ ಅರ್ಥವನ್ನು ತರಗತಿಯಲ್ಲಿ ಚರ್ಚಿಸುವುದು.
9 ಸರಳ ಪ್ರಶ್ನೆಗಳನ್ನು ಕೊಟ್ಟು ಕಲಿಕೆಯನ್ನು ಗಟ್ಟಿಗೊಳಿಸುವುದು.


****************************************************************


ಆವರಣದಲ್ಲಿ ಕೊಟ್ಟಿರುವ ಪದಗಳನ್ನು ಬಿಟ್ಟಿರುವ ಸ್ಥಳಗಳಲ್ಲಿ ತುಂಬಿ ಗಾದೆಗಳನ್ನು ಪೂರ್ಣಮಾಡಿರಿ.

ಉದಾಹರಣೆ:

1. ಕಡು--------ಬಂದಾಗ , ತಡ----------ಜಾಣ
2. ಕಾಯಕವೇ------------
3. ಕಾಲಿನದು----------ತಲೆಯದು ತಲೆಗೆ
4. --------ಒಂದು, -------ಎರಡು
5. --------ಯಿಂದ ಸುಡ-------ಬಹುದು
6. --------ಯಲಾರದವಳು ನೆಲ ಡೊಂಕು ಅಂದಳಂತೆ
7. --------ಮೇಲೆ ಬರೆ ಎಳೆದ ಹಾಗೆ
8. ---------ಗೆ ಹೆಂಡ-------ದಂತೆ
9. --------ವಾದಿ,----------ವಿರೋಧಿ.

(1 ಕೋತಿ, 2 ಖಂಡಿತ, 3 ಕುಣಿ, 4 ಕೊಂಡವನೇ, 5 ಕೊಸರಿಗೆ, 6 ಕುಡಿಸಿ, 7 ಕೋಪ, 8 ಕಾಡು, 9 ಕೈಲಾಸ, 10 ಕುರು, 12 ಕಿಡಿ, 13 ಕಾಸಿಗೆ, 14 ಕಾಲಿಗೆ, 15 ಲೋಕ)


****************************************************************


ಈ ಕೆಳಗಿನ ಪದಗಳಿಂದ ಪ್ರಾರಂಭವಾಗುವ ಗಾದೆಗಳನ್ನು ಬರೆಯಿರಿ.

1 ಕಡುಕೋಪ, 2 ಕಾಯಕವೇ, 3 ಕಾಲಿನದು, 4 ಕಾಸಿಗೆ, 5 ಕಿಡಿ, 6 ಕುಣಿ, 7 ಕುರು, 8 ಕೋತಿ, 9 ಖಂಡಿತ. ಇದೇ ರೀತಿಯಲ್ಲಿ ಒತ್ತಕ್ಷರಗಳಿರುವ ಗಾದೆಗಳನ್ನು ಅಭ್ಯಾಸ ಮಾಡಿಸಿವುದು.
ಗಾದೆಯ ಮಹತ್ವವನ್ನು ತಿಳಿಸುವ ಗಾದೆಗಳನ್ನು ಪಟ್ಟಿಮಾಡಿರಿ.


ಈ ಕೆಳಗಿನ ಗಾದೆಗಳನ್ನು ಪೂರ್ಣಮಾಡಿರಿ.

1. ಅಟ್ಟ ಮೇಲೆ ಒಲೆ ಉರಿತು ಕೆಟ್ಟ ಮೇಲೆ ---------
2. ----------------ನೀರು ಕುಡಿಯಲೇ ಬೇಕು
3. ಕಾಯಕವೇ -----------
4. ಕುರಿ ಕಾಯಲು ------------ ನೇಮಿಸಿದಂತೆ
5. ಕೊಟ್ಟಿದ್ದು ತನಗೆ ------------
6. -------------- ಕುಡಿಕೆ ಹೊನ್ನು ಸಾಲದು
7. ಬಾಯಲ್ಲಿ ----------- ಕೈಯಲ್ಲಿ ದೊಣ್ಣೆ
8. ಮಾತು ಬೆಳ್ಳಿ ----------------
9. -------- ಸುಳ್ಳಾದರು -------- ಸುಳ್ಳಾಗದು
10. ------ಗಿಂತ ------ ಮೇಲು
11. ----------- ಇದ್ದಷ್ಟು ---------- ಚಾಚು 

****************************************************************


ಯಾವುದಾರರೂ ಒಂದು ವ್ಯಂಜನವನ್ನು ತೆಗೆದುಕೊಂಡು ಆ ಅಕ್ಷರದಿಂದಲೇ ಪ್ರಾರಂಭವಾಗುವ ಮತ್ತು ಆ ಅಕ್ಷರಗಳೇ ಮಧ್ಯ ಮಧ್ಯದಲ್ಲಿ ಬರುವ ಗಾದೆಗಳನ್ನು ಬಳಸಿ ಗುಣಿತಾಕ್ಷರದ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಬಳಸಿಕೊಳ್ಳ ಬಹುದು. ವಿದ್ಯಾರ್ಥಿಗಳಿಗೆ ಕಾಗುಣಿತದ ಪರಿಕಲ್ಪನೆ ಮೂಡಿದ ಮೇಲೆ ಬೇರೆ ಬೇರೆ ಗುಣಿತಾಕ್ಷರಗಳಿಂದ ಆರಂಭವಾಗುವ ಗಾದೆಗಳನ್ನು ಪಟ್ಟಿಮಾಡುವಂತೆ ತಿಳಿಸುವುದು.

ಉದಾಹರಣೆ:

ಕ್+ಅ = ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು

ಕ್+ಆ = ಕಾಸಿಗೆ ತಕ್ಕ ಕಜ್ಜಾಯ.

ಕ್+ಇ = ಕಿಡಿ ಸಣ್ಣದಾದರೂ ಕಾಡನ್ನೆಲ್ಲಾ ಸುಡ ಬಲ್ಲದು

ಕ್+ಈ = ಕೀರ್ತಿಯೇ ಕೈಲಾಸ ಅಪಕೀರ್ತಿಯೇ ನರಕ

ಕ್+ಉ = ಕುದುರೆ ಕಂಡರೆ ಕಾಲುನೋವು

ಕ್+ಊ = ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿದ್ರು

ಕ್+ಋ = ಕೃತಿ ಇಲ್ಲದ ಮಾತು ಕಸ ಬೆಳೆದ ತೋಟವಿದ್ದಂತೆ

ಕ್+ಎ = ಕೆಡುವ ಕಾಲಕ್ಕೆ ಬುದ್ಧಿಯಿಲ್ಲ ಮರಣ ಕಾಲಕ್ಕೆ ಮದ್ದಿಲ್ಲ

ಕ್+ಏ = ಕೇಳಿ ತಿಳಿ ಮಾಡಿ ಕಲಿ

ಕ್+ಐ = ಕೈ ಕೆಸರಾದರೆ ಬಾಯಿ ಮೊಸರು

ಕ್+ಒ = ಕೊಡಲಿ ಕಾವು ಕುಲಕ್ಕೆ ಸಾವು

ಕ್+ಓ = ಕೋಣೆಯ ಕೂಸು ಕೊಳೆಯಿತು; ಬೀದಿ ಕೂಸು ಬೆಳೆಯಿತು

ಕ್+ಅಂ = ಕಂಕುಳಲ್ಲಿ ಮಗು ಇಟ್ಟುಕೊಂಡು ಊರೆಲ್ಲ ಹುಡುಕಿದರಂತೆ

ಕ್+ಅಃ = ಕಃ

****************************************************************

ಹಾವು ಏಣಿ ಆಟ

****************************************************************

ಜನವರಿ

01 - ವಿಶ್ವ ಶಾಂತಿ ದಿನ.
02 - ವಿಶ್ವ ನಗುವಿನ ದಿನ.
12 - ರಾಷ್ಟ್ರೀಯ ಯುವ ದಿನ(ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ)
15 - ಭೂ ಸೇನಾ ದಿನಾಚರಣೆ.
25 - ಅಂತರರಾಷ್ಟ್ರೀಯ ತೆರಿಗೆ ದಿನ.
28 - ಸರ್ವೋಚ್ಛ ನ್ಯಾಯಾಲಯ ದಿನ.
30 - ಸರ್ವೋದಯ ದಿನ/ಹುತಾತ್ಮರ ದಿನ/ಕುಷ್ಟರೋಗ ನಿವಾರಣಾ ದಿನ(ಗಾಂಧಿಜೀ ಪುಣ್ಯತಿಥಿ)


ಫೆಬ್ರವರಿ 

21- ವಿಶ್ವ ಮಾತೃಭಾಷಾ ದಿನ.
22 - ಸ್ಕೌಟ್ & ಗೈಡ್ಸ್ ದಿನ
23 - ವಿಶ್ವ ಹವಾಮಾನ ದಿನ.
28 - ರಾಷ್ಟ್ರೀಯ ವಿಜ್ಞಾನ ದಿನಾಚರಣೆ.


ಮಾರ್ಚ್

08 - ಅಂತರಾಷ್ಟ್ರೀಯ ಮಹಿಳಾ ದಿನ.
12 - ದಂಡಿ ಸತ್ಯಾಗ್ರಹ ದಿನ.
15 - ವಿಶ್ವ ಬಳಕೆದಾರರ ದಿನ.
21 - ವಿಶ್ವ ಅರಣ್ಯ ದಿನ.
22 - ವಿಶ್ವ ಜಲ ದಿನ.


ಏಪ್ರಿಲ್
01 - ವಿಶ್ವ ಮೂರ್ಖರ ದಿನ.
07 - ವಿಶ್ವ ಆರೋಗ್ಯ ದಿನ.
14 - ಡಾ. ಅಂಬೇಡ್ಕರ್ ಜಯಂತಿ.
22 - ವಿಶ್ವ ಭೂದಿನ.
23 - ವಿಶ್ವ ಪುಸ್ತಕ ದಿನ.


ಮೇ

01 - ಕಾರ್ಮಿಕರ ದಿನ.
02 - ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ.
05 - ರಾಷ್ಟ್ರೀಯ ಶ್ರಮಿಕರ ದಿನ.
08 - ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ
15 - ಅಂತರಾಷ್ಟ್ರೀಯ ಕುಟುಂಬ ದಿನ.



ಜೂನ್

05 - ವಿಶ್ವ ಪರಿಸರ ದಿನ.(1973)
14 - ವಿಶ್ವ ರಕ್ತ ದಾನಿಗಳ ದಿನ
26 - ಅಂತರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನ.



ಜುಲೈ

01 - ರಾಷ್ಟ್ರೀಯ ವೈದ್ಯರ ದಿನ.
11 - ವಿಶ್ವ ಜನಸಂಖ್ಯಾ ದಿನ.



ಆಗಸ್ಟ್
06 - ಹಿರೋಶಿಮಾ ದಿನ.
09 - ನಾಗಾಸಾಕಿ ದಿನ/ಕ್ವಿಟ್ ಇಂಡಿಯಾ ದಿನಾಚರಣೆ.
15 - ಸ್ವಾತಂತ್ರ್ಯ ದಿನಾಚರಣೆ.
29 - ರಾಷ್ಟ್ರೀಯ ಕ್ರೀಡಾ ದಿನಾಚರಣೆ.



ಸೆಪ್ಟೆಂಬರ್

05 - ಶಿಕ್ಷಕರ ದಿನಾಚರಣೆ(ರಾಧಾಕೃಷ್ಣನ್ ಜನ್ಮ ದಿನ)
08 - ವಿಶ್ವ ಸಾಕ್ಷರತಾ ದಿನ
14 - ಹಿಂದಿ ದಿನ(ಹಿಂದಿ ದಿವಸ್ 1949)
15 - ಅಭಿಯಂತರರ(ಇಂಜಿನಿಯರ್) ದಿನ, (ಸರ್ ಎಮ್ ವಿಶ್ವೇಶ್ವರಯ್ಯ ಜನ್ಮ ದಿನ).
16 - ವಿಶ್ವ ಓಝೋನ್ ದಿನ.
28 - ವಿಶ್ವ ಹೃದಯ ದಿನ.



ಅಕ್ಟೋಬರ್
02 - ವಿಶ್ವ ಅಹಿಂಸಾ ದಿನ/ಗಾಂಧೀ ಜಯಂತಿ/ಲಾಲ್ ಬಹದ್ದೂರ್ ಜಯಂತಿ
05 - ವಿಶ್ವ ಶಿಕ್ಷಕರ ದಿನ.
08 - ವಾಯು ಸೇನಾ ದಿನ
09 - ವಿಶ್ವ ಅಂಚೆ ದಿನ.
10 - ವಿಶ್ವ ಮಾನಸಿಕ ಆರೋಗ್ಯ ದಿನ.
16 - ವಿಶ್ವ ಆಹಾರ ದಿನ.
24 - ವಿಶ್ವ ಸಂಸ್ಥೆಯ ದಿನ.
31 - ರಾಷ್ಟ್ರೀಯ ಏಕತಾ ದಿನ(ಸರ್ದಾರ್ ವಲ್ಲಭಭಾಯಿ ಪಟೇಲ ಜನ್ಮ ದಿನ)



ನವೆಂಬರ್

01 - ಕನ್ನಡರಾಜ್ಯೋತ್ಸವ ದಿನ
14 - ಮಕ್ಕಳದಿನಾಚರಣೆ/ಜವಾಹರ್ ಲಾಲ್ ನೆಹರೂ ಜನ್ಮ ದಿನ.
29 - ಅಂತರರಾಷ್ಟ್ರೀಯ ಸಾಮರಸ್ಯ ದಿನ.



ಡಿಸೆಂಬರ್

01 - ವಿಶ್ವ ಏಡ್ಸ್ ದಿನ.
02- ರಾಷ್ಟ್ರೀಯಮಾಲಿನ್ಯ ನಿಯಂತ್ರಣ ದಿನ.
03 - ವಿಶ್ವಅಂಗವಿಕಲರ ದಿನ.
04 - ನೌಕಾಸೇನಾ ದಿನ.
07 - ಧ್ವಜ ದಿನಾಚರಣೆ.
10 – ವಿಶ್ವಮಾನವ ಹಕ್ಕುಗಳ ದಿನಾಚರಣೆ(1948)
23 - ರೈತರದಿನ (ಚರಣಸಿಂಗ್ ಜನ್ಮ ದಿನ)

No comments:

Post a Comment