ವಚನ - ತ್ರಿಪದಿಗಳು - ಕೀರ್ತನೆಗಳು


ವಚನಗಳು

ಸಮಗ್ರ ವಚನ ಸಾಹಿತ್ಯ ಕನ್ನಡದ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಒಂದು. ೧೧ನೇ ಶತಮಾನದ ಉತ್ತರಾರ್ಧದಲ್ಲಿ ಉದಯಿಸಿ ೧೨ನೇ ಶತಮಾನದ ಕಡೆಯವರೆಗೂ ಬಸವಣ್ಣನವರ-ಜನಸಾಮಾನ್ಯರ ಆಂದೋಲನದ ಭಾಗವಾಗಿ ಬೆಳೆದು ಬಂತು. ಇದು ಸಾಹಿತ್ಯ ಪರಿಭಾಷೆಯ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರದ ಕಾವ್ಯ. ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಕನ್ನಡದ ವಿಶೇಷ ಕಾವ್ಯ ಪ್ರಕಾರ. ವಚನ ಸಾಹಿತ್ಯವು ತನ್ನ ಕಾಲದಲ್ಲಿನ ಜನರ ಮನೋಭಿವ್ಯಕ್ತಿಗೆ ಸಂಗಾತಿಯಾಯಿತು.ವಚನ ಎಂದರೆ 'ಪ್ರಮಾಣ', 'ಕೊಟ್ಟ ಮಾತು' ಎಂದರ್ಥ.
ವಚನ ಸಾಹಿತ್ಯದ ಶ್ರೀಮಂತಿಕೆಗೆ ನೂರಾರು ಜನ ಶರಣರು ಶ್ರಮಿಸಿದ್ದಾರೆ. ತಮ್ಮ ವಚನಗಳಲ್ಲಿ ತಮ್ಮದೇ ಆದ ಅಂಕಿತನಾಮಗಳನ್ನು ಬಳಸಿದ್ದಾರೆ.

ಜೇಡರ ದಾಸಿಮಯ್ಯ 'ರಾಮನಾಥ'
ಅಕ್ಕಮಹಾದೇವಿಯು 'ಚೆನ್ನಮಲ್ಲಿಕಾರ್ಜುನ'
ಬಸವಣ್ಣನವರು 'ಕೂಡಲ ಸಂಗಮದೇವ'

ಮತ್ತಿತರ ಸುಪ್ರಸಿದ್ಧ ವಚನಕಾರರೆಂದರೆ: 

ವಚನ ಸಾಹಿತ್ಯ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ


Image result for ವಚನ

ಬಾಹ್ಯ ಸಂಪರ್ಕಗಳು:

ಕನ್ನಡ ವಿಕಿಸೋರ್ಸಿನಲ್ಲಿ ವಚನಗಳು

ವಚನ ಸಂಚಯ

ಸಮಗ್ರ ವಚನ ಸಾಹಿತ್ಯ 

ವಚನಗಳ ಹೊನಲು 

ವಚನಗಳ ಚಿಲುಮೆ 

ಬಸವಣ್ಣನ ವಚನಗಳು 

ಬಸವಣ್ಣನವರ ಜೀವನ ಕಥೆ  

ಸಮಗ್ರ ವಚನ ಸಾಹಿತ್ಯ -೨



ತ್ರಿಪದಿಗಳು

ಒಟ್ಟು ಸುಮಾರು ೧,೦೦೦ ತ್ರಿಪದಿಗಳು ಸರ್ವಜ್ಞನ ಹೆಸರಿನಲ್ಲಿ ದಾಖಲಾಗಿವೆ. ಚರಿತ್ರಜ್ಞರ ಪ್ರಕಾರ ಇವುಗಳಲ್ಲಿ ಕೆಲವು ತ್ರಿಪದಿಗಳು ನಂತರದ ಕಾಲದಲ್ಲಿ ಬೇರೆ ಬೇರೆ ಲೇಖಕರಿಂದ ಬರೆಯಲ್ಪಟ್ಟಿರಬಹುದು. ಸರ್ವಜ್ಞನ ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬದ್ಧತೆಯಿಂದ ಜನಪ್ರಿಯವಾಗಿವೆ. ಈ ತ್ರಿಪದಿಗಳು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಕುರಿತವು. ಹಲವು ಒಗಟುಗಳು ಸಹ ಸರ್ವಜ್ಞನ ತ್ರಿಪದಿಗಳಲ್ಲಿ ಸೇರಿವೆ.


ತ್ರಿಪದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




ದಾಸ ಸಾಹಿತ್ಯ

ಶ್ರೀ ವಿಜಯದಾಸರ ಜೀವನ ವೃತ್ತಾಂತ.

ಕನ್ನಡ ಸಾಹಿತ್ಯ ಚರಿತ್ರೆಯನ್ನು ಸಮಗ್ರವಾಗಿ ಅವಲೋಕಿಸಿದಾಗ ವಿಶ್ವಸಾಹಿತ್ಯಕ್ಕೆ ಕನ್ನಡದ್ದೇ ಆದ ಕೊಡುಗೆ ಎಂದರೆ ವಚನಸಾಹಿತ್ಯ ಮತ್ತು ದಾಸಸಾಹಿತ್ಯ ಎನ್ನಬಹುದು. ಇವು ಕನ್ನಡ ಸಾಹಿತ್ಯ ಶಾರದೆಯ ಎರಡು ಕಣ್ಣುಗಳಿದ್ದಂತೆ. ಈ ಪೈಕಿ ದಾಸಸಾಹಿತ್ಯವು ಭಕ್ತಿಮಾರ್ಗದ ಪ್ರತಿಪಾದನೆಯ ಜತೆಗೆ ಕನ್ನಡದ ಭಾಷಿಕ ಶಕ್ತಿಯ ಬಹು ಆಯಾಮಗಳನ್ನು ತೆರೆದು ತೋರಿರುವುದಲ್ಲದೆ ಭಾರತೀಯ ಸಂಗೀತ ಶಾಸ್ತ್ರದಲ್ಲಿ ಅಮರವಾದ ಕರ್ನಾಟಕ ಸಂಗೀತದ ಸಿದ್ಧಿ ಪ್ರಸಿದ್ಧಿಗೆ ಸಾಕ್ಷಿಯಾಗಿದೆ. ಈ ದೃಷ್ಟಿಯಿಂದ ಸಾಹಿತ್ಯ ಮತ್ತು ಸಂಗೀತ ಸಾಮರಸ್ಯ ಹೊಂದಿರುವ ಹರಿದಾಸ ಸಾಹಿತ್ಯ ವಿಶ್ವಸಾಹಿತ್ಯಕ್ಕೆ ಕನ್ನಡನಾಡು ನೀಡಿರುವ ವಿಶಿಷ್ಟ ಕೊಡುಗೆ ಎಂದರೆ ತಪ್ಪಾಗದು.

ವಚನ ಮತ್ತು ದಾಸ ಸಾಹಿತ್ಯಗಳು ಅಂಕಿತ ಬದಲಿಸಿದರೂ ಅಂತಃಕರಣ ಒಂದೇ ಎಂಬಂತೆ ಹಲವಾರು ವಿಷಯಗಳಲ್ಲಿ ಸಾದೃಶ್ಯ ಹೊಂದಿದೆ. ನಡುಗನ್ನಡ ಬಳಕೆ, ಆಡುಮಾತಿನ ಸೊಗಸಾದ ಅಳವಡಿಕೆ, ಜನಬಳಕೆಯ ಶಬ್ದಸಂಪತ್ತು, ತತ್ತ್ವಪ್ರತಿಪಾದನೆ, ಭಕ್ತಿಪ್ರತಿಪಾದನೆ ಮೊದಲಾದ ವಿಷಯಗಳಲ್ಲಿ ದಾಸ - ವಚನÀ ಸಾಹಿತ್ಯಗಳ ಹೂರಣ ಒಂದೇ, ತೋರಣ ಬೇರೆ. ಆದರೆ ಸಂಗೀತ - ನೃತ್ಯ ಅಂಶಗಳ ಅಳವಡಿಕೆ, ವಿಶಿಷ್ಟ ಛಂದೋಬದ್ಧ ರಚನೆಗಳು, ತನ್ನದೇ ಆದ ಸಿದ್ಧಾಂತ, ಆಚಾರ ಪ್ರತಿಪಾದನೆ, ಸಂಸ್ಕøತ ಕನ್ನಡ ಎರಡರಲ್ಲೂ ಒಬ್ಬರÉೀ ಸಾಹಿತ್ಯ - ಶಾಸ್ತ್ರ ರಚನೆ ಮಾಡುವುದು ಇದೇ ಮೊದಲಾದ ಹಿರಿಮೆಗಳನ್ನು ದಾಸಸಾಹಿತ್ಯ ಹೊಂದಿದೆ.

ಹತ್ತಾರು ವಿಷಯಗಳಲ್ಲಿ ವಚನ ಸಾಹಿತ್ಯದಂತೆ ಕನ್ನಡತನ, ಕನ್ನಡ ಸಂಸ್ಕøತಿಯನ್ನು ದಾಸಸಾಹಿತ್ಯ ಒಳಗೊಂಡಿದೆ. ಹರಿದಾಸ ಸಾಹಿತ್ಯದ ಉಗಮ ವಿಕಾಸ ಪ್ರಗತಿಯ ಹಂತಗಳೆಲ್ಲ ಕರ್ನಾಟಕದಲ್ಲೇ ಆಗಿದೆ. ಪ್ರಾಚೀನ ಭಾಗವತಪಂಥ ಮತ್ತು ಮಧ್ವಮತ ತತ್ತ್ವಗಳನ್ನು ಸಂಸ್ಕøತ ಮತ್ತು ಕನ್ನಡ ಭಾಷೆಗಳಲ್ಲಿ ಅಚ್ಚುಕಟ್ಟಾಗಿ ಅಭಿವ್ಯಕ್ತಗೊಳಿಸಿದ್ದು ದಾಸಸಾಹಿತ್ಯ. ಮಧ್ವಮತ ಸಿದ್ಧಾಂತ ಪ್ರತಿಪಾದಕರಾದ ಆಚಾರ್ಯ ಮಧ್ವರು ಕನ್ನಡಿಗರು. ಹೀಗೆ ದೇಶ, ಭಾಷೆ, ಸಿದ್ಧಾಂತ, ಸಾಹಿತ್ಯ, ಆಚಾರ್ಯ ಪುರುಷರುಗಳೆಲ್ಲ ಕರ್ನಾಟಕದ್ದು ಕನ್ನಡದ್ದು ಇದರ ಪ್ರತಿಫಲನವೇ ಹರಿದಾಸ ಸಾಹಿತ್ಯ.

ಹರಿದಾಸ ಸಾಹಿತ್ಯವನ್ನು ಅಧ್ಯಯಾನುಕೂಲಕ್ಕಾಗಿ ವಿದ್ವಾಂಸರು ನಾನಾ ರೀತಿ ವರ್ಗೀಕರಿಸಿದ್ದಾರೆ. ಕಾಲಮಾನದ ದೃಷ್ಟಿಯಿಂದ ಶ್ರೀಪಾದರಾಜ ಪೂರ್ವ ಯುಗ ( ಕ್ರಿ. ಶ. 879-1450) ಶ್ರೀ ಪಾದರಾಜ ಯುಗ (ಕ್ರಿ. ಶ. 1451-1565) ವಿಜಯದಾಸಯುಗ (ಕ್ರಿ ಶ 1566-1809) ವಿಜಯದಾಸರ ಶಿಷ್ಯಪ್ರಶಿಷ್ಯಯುಗ ( ಕ್ರಿ, ಶ. 1810 ರಿಂದ) ಎಂದು ವರ್ಗೀಕರಿಸಿದ್ದಾರೆ.

ಸಾಧನೆಯ ಘಟ್ಟಗಳ ಹಿನ್ನೆಲೆಯಲ್ಲಿ ಪುರಂದರದಾಸರ ಯುಗವನ್ನು ಪ್ರಥಮ ಘಟ್ಟವೆಂತಲೂ ವಿಜಯದಾಸರ ಯುಗವನ್ನು ದ್ವಿತೀಂiÀi ಘಟ್ಟ ಎಂತಲೂ ಅನಂತರದ ಪ್ರಾಣೇಶದಾಸರ ಯುಗವನ್ನು ತೃತೀಯ ಘಟ್ಟವೆಂದೂ ವರ್ಗೀಕರಿಸುತ್ತಾರೆ.

ಕೆಲವರು ದಾಸಸಾಹಿತ್ಯದ ಬೆಳವಣಿಗೆಯ ದೃಷ್ಟಿಯಿಂದ ಹನ್ನೆರಡನೆಯ ಶತಮಾನದಿಂದ ಹತ್ತೊಂಬತ್ತನೇ ಶತಮಾನದವರೆಗೆ ಬೆಳೆದು ಬಂದ ಸಾಹಿತ್ಯವನ್ನು ನರಹರಿತೀರ್ಥರಿಂದ ಪುರಂದರ, ಕನಕದಾಸರ ಜೀವಿತ ಕಾಲದವರೆಗಿನ ಅವಧಿಯನ್ನು ಒಂದು ಘಟ್ಟವೆಂದೂ ? ಮುಂದೆ ವಿಜಯದಾಸರು ಹಾಗೂ ತರುವಾಯದ ಅವಧಿಯನ್ನು ಇನ್ನೊಂದು ಘಟ್ಟವೆಂದೂ ಪರಿಗಣಿಸುತ್ತಾರೆ. ಹೀಗೆ ಎರಡೇ ಪ್ರಧಾನ ಘಟ್ಟಗಳಾಗಿ ಎಣಿಸುವುದರಲ್ಲಿ ಸೌಲಭ್ಯವೂ ಚಾತುರ್ಯವೂ ಇದೆ. ಈ ಅವಧಿಗಳು ನರಹರಿತೀರ್ಥರ ಮತ್ತು ಶ್ರೀಪಾದರಾಯರ ನಡುವಣ ಹಾಗು ಪುರಂದರ ಮತ್ತು ವಿಜಯದಾಸರ ನಡುವಿನ ಅe್ಞÁತ ಕಾಲಗಳೆರಡನ್ನೂ ಒಳಗೊಳ್ಳುತ್ತದೆ ಎಂದು ವರ್ಗೀಕರಿಸಿದ್ದಾರೆ. ಹರಿದಾಸ ಸಾಹಿತ್ಯವನ್ನು ಆರ್. ಎಸ್ ಪಂಚಮುಖಿಯವರು ನಾಲ್ಕು ಮೆಟ್ಟಿಲುಗಳಾಗಿ ವರ್ಗೀಕರಿಸಿರುವುದನ್ನು ಪುನರ್ ವಿಮರ್ಶಿಸುತ್ತಾ ಡಾ|| ಜಿ. ವರದರಾಜರಾವ್ ಅವರು ಶ್ರೀ ಪಾದರಾಜರ ಪರಂಪರೆಯಲ್ಲಿ ನೆರವೇರಿದ ಮಹತ್ಕಾರ್ಯ ಹರಿದಾಸ ಸಾಹಿತ್ಯದ ಪರ್ವಯುಗ ಮಾತ್ರವಲ್ಲದೆ ಸುವರ್ಣಯುಗವೂ ಆಗಿರುವುದು ಆ ಕಾಲದಲ್ಲಿ ರಚಿತವಾದ ಕೃತಿಗಳ ಮೂಲಕ ವೇದ್ಯವಾಗುತ್ತದೆ. ಆದಕಾರಣ ಈ ಅವಧಿಯನ್ನು ಹರಿದಾಸರ ಸಾಹಿತ್ಯ ಸುವರ್ಣಯುಗವೆಂದು ಕರೆಯಬಹುದು. ವಿಜಯನಗರದ ಉನ್ನತಿ ಅವನತಿಗಳಿಂದ ಹರಿದಾಸ ಸಾಹಿತ್ಯವೂ ಉನ್ನತವಾಗಿ ಬೆಳಗಿ ಅನಂತರ ಇಳಿಮುಖವಾದಂತೆ ವ್ಯಕ್ತವಾಗುತ್ತದೆ. ಕೆಲಕಾಲದವರೆಗೆ ಗುಪ್ತಗಾಮಿನಿಯಾಗಿದ್ದ ಈ ಹರಿದಾಸ ಸಾಹಿತ್ಯವಾಹಿನಿ ವಿಜಯದಾಸರ ಪ್ರವೇಶದಿಂದ ಪುನಃ ಚೇತರಿಸಿಕೊಂಡು ಪರಿಪುಷ್ಟವಾಗಿ ಪ್ರಕಾಶಿಸುವುದನ್ನು ನಾವು ಸ್ಪಷ್ಟವಾಗಿ ಕಾಣಬಹುದು ಎಂದಿದ್ದಾರೆ. ಆದ್ದರಿಂದ ಈ ಉತ್ತರಾವಧಿಯನ್ನು ಹರಿದಾಸಸಾಹಿತ್ಯದ ಪುನರುಜ್ಜೀವನ ಯುಗವೆಂದು ಪರಿಗಣಿಸುವುದು ಸೂಕ್ತವೆನ್ನಿಸುತ್ತದೆ. ಹೀಗೆ ದಾಸಸಾಹಿತ್ಯದ ಪ್ರಥಮ ದ್ವಿತೀಯ ಘಟ್ಟಗಳನ್ನೇ ವರದರಾಜರಾವ್ ಅವರು ಸುವರ್ಣಯುಗ, ಪುನರುಜ್ಜೀವನಯುಗಗಳೆಂದು ಕರೆದಿರುವುದು ಅರ್ಥಪೂರ್ಣವಾಗಿದೆ.

ಯಾವುದೇ ರೀತಿಯ ವರ್ಗೀಕರಣವಾದರೂ ವಿಜಯದಾಸರ ಯುಗವೆಂದು ಪ್ರತ್ಯೇಕವಾಗಿ ಕಂಡುಬರುತ್ತದೆ ಎಂಬುದು ಗಮನಾರ್ಹ. ಎರಡನೇ ಘÀಟ್ಟ, ಪುನರುಜ್ಜೀವನಯುಗ, ಮೂರನೇ ಮೆಟ್ಟಿಲು ಏನೇ ಹೆಸರಿನಲ್ಲಿ ಕರೆಯಲಿ ವಿಜಯದಾಸರದೇ ಒಂದು ಮಾರ್ಗ, ಹಂತ, ಘಟ್ಟವಾಗಿದೆ ಎಂಬುದನ್ನು ಗಮನಿಸಬಹುದು.

ಇನ್ನೊಂದು ದೃಷ್ಟಿಯಿಂದಲೂ ಶ್ರೀ ವಿಜಯದಾಸರಿಗೆ ಮಹತ್ವವಿದೆ. 

'ನಮಃ ಶ್ರೀಪಾದರಾಜಾಯ ನಮಸ್ತೇ ವ್ಯಾಸಯೋಗಿನೇ.

ನಮಃ ಪುರಂದರಾರ್ಯಾಯ ವಿಜಯಾರ್ಯಾಯ ತೇ ನಮಃ ||' 

ಇದು ದಾಸಸಾಹಿತ್ಯದ ಸಾಧನೆಗಳ ಹಿನ್ನೆಲೆಗಳ ಹಂತಗಳನ್ನು ಹೇಳುತ್ತವೆ. ಶ್ರೀಪಾದರಾಜರು ದಾಸಸಾಹಿತ್ಯದ ಹಿರಿಮೆಗೆ ಕನ್ನಡಕ್ಕ್ಕೆ ಖಚಿತ ಸ್ಥಾನ ದೊರಕಿಸಿ ಕೊಟ್ಟರೆ ವ್ಯಾಸರಾಯರು ಸಂಸ್ಕøತಕ್ಕೂ ಕನ್ನಡಕ್ಕೂ ಉನ್ನತಿ ತಂದುಕೊಟ್ಟರು. ಪುರಂದರದಾಸರು ಇವನ್ನು ಜನರ ಪಾಲಿಗೆ ಜನಪ್ರಿಯಗೊಳಿಸಿಕೊಟ್ಟರು. ತಾವೇ ದೇವರನಾಮಗಳ ಮೂಲಕ ಕರ್ನಾಟಕ ಸಂಗೀತ ಪದ್ಧತಿಗೆ ಬುನಾದಿ ಹಾಕಿ ದಾಸಸಾಹಿತ್ಯ ಗಂಗೆಯ ಭಗೀರಥರಾದರು. ಇವರೆಲ್ಲರ ಸಾಧನೆ ಕಾಲಗರ್ಭದಲ್ಲಿ ಸೇರುತ್ತಿದ್ದಾಗ ಅದನ್ನು ಪುನರುತ್ಥಾನಗೊಳಿಸಿದವರು ಶ್ರೀ ವಿಜಯದಾಸರು. ಆದ ಕಾರಣ ಈ ನಾಲ್ವರನ್ನು ಕ್ರಮವಾಗಿ ಸ್ಮರಿಸುವ ಪರಂಪರೆಯನ್ನು ಕಾಣುತ್ತೇವೆ.

ವಿಜಯದಾಸರ ವಿಶೇಷ ಕೊಡುಗೆ ಎಂದರೆ ಮೊದಲ ಘಟ್ಟದ ದಾಸವರೇಣ್ಯರನ್ನು, ದಾಸ ಸಾಹಿತ್ಯವನ್ನು ಪುನರುಜ್ಜೀವನಗೊಳಿಸಿ ಪರಂಪರೆಯನ್ನು ಶಿಷ್ಯವೃಂದದ ಮೂಲಕ ಮುಂದುವರೆಸಿದುದು. ಇಂದು ಕರ್ನಾಟಕದಲ್ಲಿ ಕಾಣುವ ನೂರಾರು ಜನ ಹರಿದಾಸರು ಮೂಲತಃ ವಿಜಯದಾಸರ ಮತ್ತು ಶಿಷ್ಯರ ಪರಂಪರೆಗೆ ಸೇರಿದವರು ಎಂಬುದನ್ನು ನೆನಪಿನಲ್ಲಿಡಬೇಕು 19 ಮತ್ತು 20ನೇ ಶತಮಾನದಲ್ಲಿ ಕಂಡುಬರುವ ದಾಸರೆಲ್ಲರೂ ವಿಜಯದಾಸರ ಶಿಷ್ಯಪ್ರಶಿಷ್ಯ ಪರಂಪÀರೆಯವರೇ ಆಗಿದ್ದಾರೆ. ಇವರಲ್ಲಿ ಹರಿದಾಸಿಯರೂ ಸೇರಿದ್ದಾರೆ.

ಹೀಗೆ ವಿಜಯದಾಸರ ಯುಗ ಹರಿದಾಸ ಸಾಹಿತ್ಯದಲ್ಲಿ ಅವಿಸ್ಮರಣೀಯ ವಾಗಿದ್ದು ವಿಜಯದಾಸರು ಉತ್ತರಕಾಲೀನ ಹರಿದಾಸ ಸಾಹಿತ್ಯದ ಆದ್ಯ ಮಾರ್ಗದರ್ಶಕರಾಗಿದ್ದಾರೆ.

ವಿಜಯದಾಸರು ಪುರಂದರದಾಸರ ಜೀವನವನ್ನು ಕುರಿತು ಹೇಳಿದಂತೆ ವಿಜಯದಾಸರ ಜೀವನವನ್ನು ಶಿಷ್ಯ ಪ್ರಶಿಷ್ಯ ದಾಸರು ಹಾಡಿದ್ದಾರೆ. ಹಾಗಾಗಿ ಸಾಕಷ್ಟು ಮಾಹಿತಿ ಅವರ ಜೀವನದ ಬಗ್ಗೆ ದೊರೆಯುತ್ತದೆ. ಐತಿಹಾಸಿಕ ಸಂಗತಿಗಳ ಜತೆಗೆ ಪರಂಪರಾಗತವಾಗಿ ಬಂದ ನಂಬಿಕೆ ಐತಿಹ್ಯಗಳೂ ಇಲ್ಲಿ ಸೇರಿರುವುದನ್ನು ಮರೆಯಲಾಗದು. ಕೀರ್ತನೆ, ಸುಳಾದಿಗಳಲ್ಲಿ ಸಿಗುವ ವಿಷಯಗಳನ್ನು ಆಧÀರಿಸಿ ಇತರ ಆಕರಗಳನ್ನು ಗಮನಿಸಿ ಸ್ಥೂಲವಾಗಿ ಶ್ರೀ ವಿಜಯದಾಸರ ಜೀವನವನ್ನು ಇಲ್ಲಿ ನಿರೂಪಿಸಿದೆ.

ಕರ್ನಾಟಕದ ರಾಯಚೂರು ಜಿಲ್ಲೆಯ ಮಾನವಿ ಬಳಿಯಲ್ಲಿ ಚೀಕಲ ಪರವಿ ಗ್ರಾಮ ಐತಿಹಾಸಿಕ ಮಹತ್ವ ಪಡೆದ ಸ್ಥಳವಾಗಿದೆ. ಶ್ರೀಪಾದರಾಜರು ದೇಶಸಂಚಾರದ ಕಾಲದಲ್ಲಿ ಈ ಗ್ರಾಮಕ್ಕೆ ಬಂದವರು ಅಶ್ವತ್ಥವೃಕ್ಷ ಬೆಳಸಿ ಕಟ್ಟೆ ಕಟ್ಟಿ ಆ ವೃಕ್ಷದಡಿಯಲ್ಲಿ ಲಕ್ಷ್ಮೀನರಸಿಂಹದೇವರನ್ನು ಪ್ರತಿಷ್ಠಾಪಿಸಿ ಪುಣ್ಯಕ್ಷೇತ್ರವಾಗಿಸಿದರು. ಈ ಗ್ರಾಮದಲ್ಲಿ ಭಾರದ್ವಾಜ ಗೋತ್ರದ ಋಕ್‍ಶಾಖೆಗೆ ಸೇರಿದ ಬ್ರಾಹ್ಮಣ ಮನೆತನದ ಬಡ ದಂಪತಿಗಳು ಕಷ್ಟದಿಂದ ಬಾಳುವೆ ಮಾಡುತ್ತಿದ್ದರು. ಶ್ರೀನಿವಾಸಪ್ಪ - ಕೂಸಮ್ಮ ಆ ದಂಪತಿಗಳ ಹೆಸರು. ದೈವಭಕ್ತರಾದ ಇವರು ಶ್ರೀಪಾದರಾಜರಿಂದ ಸ್ಥಾಪಿತವಾದ ಲಕ್ಷ್ಮೀನರಸಿಂಹನನ್ನು ಆರಾಧಿಸುತ್ತಿದ್ದರು. ಇವರಿಗೆ ಮೂರು ಜನ ಮಕ್ಕಳಾದರು. ಇದರಲ್ಲಿ ಹಿರಿಯವನೇ ದಾಸಪ್ಪ. ಇವರೇ ಮುಂದೆ ವಿಜಯದಾಸರೆಂದು ಪ್ರಸಿದ್ದರಾದವರು. ದಾಸಪ್ಪ ಜನಿಸಿದ್ದು ಶಾಲಿವಾಹನ ಶಕ 1604 (ಕ್ರಿ. ಶ. 1682) ದುಂದುಭಿ ಸಂವತ್ಸರದಲ್ಲಿ. ಮಕ್ಕಳ ಸಂಪತ್ತು ದೊರೆತರೂ ಧನಧಾನ್ಯ ಸಂಪತ್ತು ದೊರೆಯಲಿಲ್ಲ. ಬಡತನದಲ್ಲೇ ಬಾಳ್ವೆ ಸಾಗಿತು. ಬುದ್ಧಿವಂತ ಬಾಲಕನಾಗಿ ಬೆಳೆದರೂ ದಾಸಪ್ಪನನ್ನು ಊರಿನವರು ಕೂಸೀಮಗ ದಾಸನೆಂದು ತಿರಸ್ಕಾರದಿಂದ ಕಾಣುತ್ತಿದ್ದರು. ಬಾಲ್ಯದಲ್ಲಿ ವಿಜಯದಾಸರು ದಾಸಪ್ಪನಾಗಿದ್ದಾಗ ಇದ್ದ ಬಡತನವನ್ನು e್ಞÁಪಿಸಿಕೊಳ್ಳುತ್ತಾ 'ಸಂಜೆತನಕ ಇದ್ದು ಸಣ್ಣ ಸವುಟು ತುಂಬ ಗಂಜಿ ಕಾಣದಲೆ ಬಳಲಿದೆನೊ' ಎಂದಿದ್ದಾರೆ.

ಬಡತನದಲ್ಲಿದ್ದರೂ ಕಾಲಕಾಲಕ್ಕೆ ನಡೆಯಬೇಕಾದ್ದ ಅಕ್ಷರಾಭ್ಯಾಸ ಉಪನಯನ, ವಿವಾಹಗಳನ್ನು ತಂದೆ ತಾಯಿಯರು ನಿಲ್ಲಿಸಲಿಲ್ಲ. ಆ ಕಾಲದ ಸಂಪ್ರದಾಯಾನುಸಾರ ಅರಳಮ್ಮ ಎಂಬ ಕನ್ಯೆಯನ್ನು ತಂದು ದಾಸಪ್ಪನಿಗೆ ಮದುವೆಮಾಡಿ ಗೃಹಸ್ಥಪಟ್ಟ ಕಟ್ಟಿದರು. ಕೆಲವು ಕಾಲಾನಂತರ ಸಂಸಾರದ ತಾಪತ್ರಯವನ್ನು ತಾಳಲಾರದೆಯೊ, ಬಂಧುವರ್ಗದವರಿಂದ ಆಗುತ್ತಿದ್ದ ತಿರಸ್ಕಾರವನ್ನು ಸಹಿಸಲಾಗದಯೋ, ತನ್ನಿಂದ ಕುಟುಂಬ ರಕ್ಷಣೆ ಮಾಡಲಾಗದ ವ್ಯಥೆಯ ಕಾರಣದಿಂದಲೋ, ಬೇಸರ ಹೊಂದಿ ಯಾರಿಗೂ ತಿಳಿಸದೆ ದಾಸಪ್ಪನು ತನ್ನ ಹದಿನಾರನೆಯ ವಯಸ್ಸಿನಲ್ಲಿ ಮನೆಬಿಟ್ಟು ಹೊರಟನು. ಸಂಚಾರದ ಕಾಲದಲ್ಲಿ ಹತ್ತಿರವಿದ್ದ ಬಟ್ಟೆ ಬರೆ, ಬುತ್ತಿ ಎಲ್ಲವನ್ನು ಕಳ್ಳರು ಅಪಹರಿಸಿದರು. ಇದರಿಂದ ಇನ್ನಷ್ಟು ವೈರಾಗ್ಯ ತಾಳಿ ಸಂಚಾರವನ್ನು ಮುಂದುವರಸಿದಾಗ ಮಾರ್ಗ ಮಧ್ಯದಲ್ಲಿ ಬಾವಾಜಿ ಸನ್ಯಾಸಿಗಳ ಗುಂಪನ್ನು ಸೇರಿ ಅವರಂತೆಯೆ ಆಚಾರ ವ್ಯವಹಾರಗಳನ್ನು ಅನುಸರಿಸುತ್ತಾ ಅನೇಕ ಯಾತ್ರಾ ಕ್ಷೇತ್ರಗಳನ್ನು ದರ್ಶಿಸುತ್ತಾ ಕಾಶೀಯಾತ್ರೆ ಮುಗಿಸಿ ರಾಮೇಶ್ವರ ಯಾತ್ರೆಗಾಗಿ ದಕ್ಷಿಣದತ್ತ ಬರುವಾಗ ಸುಮಾರು ನಾಲ್ಕು ವರ್ಷಗಳನಂತರ ತನ್ನ 20ನೆಯ ವಯಸ್ಸಿನಲ್ಲಿ ಚೀಕಲಪರಿವಿಗೆ ಬಂದಾಗ ಅವನನ್ನು ಕುಟುಂಬದವರು ಗುರುತಿಸಿದÀರು ಮತ್ತೆ ಕಟ್ಟೆಕಲ್ಲು ಕಟ್ಟೆಗೆ ಕೂತಿತು ಎಂಬಂತೆ ಗೃಹಸ್ಥಜೀವನಕ್ಕೆ ದಾಸಪ್ಪ ಮರಳಿದನು.

ದೇಶಸಂಚಾರ ಮಾಡಿ ಬಂದುದ್ದರಿಂದ ಸಾಕಷ್ಟು ಲೋಕಾನುಭವ ಉಂಟಾಗಿತ್ತು. ಜೀವನದಲ್ಲಿ ಕಷ್ಟ ಎಲ್ಲರಿಗೂ ಇದ್ದುದ್ದೇ. ಅದನ್ನು ದಿಟ್ಟವಾಗಿ ಎದುರಿಸಬೇಕೇ ಹೊರತು ಅಂಜಿ ಹಿಂಜರಿಯಬಾರದು ಎಂಬ ಪಾಠ ಕಲಿತಿದ್ದನು. ಮತ್ತೆ ಧರ್ಮಿಷ್ಠನಾಗಿ ಬಾಳುವೆಗೆ ತೊಡಗಿದನು. ದೈವಕೃಪೆಯಿಂದ ಹದಿನೆಂಟು ಗ್ರಾಮಗಳ ಶಾನುಭೋಗಿಕೆ ದೊರೆತಿದ್ದರಿಂದ ಸ್ವಲ್ಪ ಮಟ್ಟಿಗೆ ಅನ್ನ ಬಟ್ಟೆಗೆ ನೆರವು ಸಿಕ್ಕಿ ಸಂಸಾರದಲ್ಲಿ ಸ್ವಲ್ಪ ನೆಮ್ಮದಿ ಸಿಗುವಂತಾಯಿತು. ಚಕ್ರದ ಅರೆಗಳ ಏಳುಬೀಳಿನ ಹಾಗೆ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು ಎನ್ನುವ ವೇಳೆಗೆ ಮತ್ತೆ ಬಿಗಡಾಯಿಸುವ ಸ್ಥಿತಿ ಬಂದಿತು. ತಂದೆ ನಿಧನರಾಗಿ ಜವಾಬ್ದಾರಿ ಹೆಚ್ಚಿ ಯಾವುದೋ ಕಾರಣದಿಂದ ಹಣದ ಲೆಕ್ಕ ತಪ್ಪಿ ಸರ್ಕಾರಕ್ಕೆ ಹಣ ಕೊಡಬೇಕಾದ ಪರಿಸ್ಥಿತಿ ಬಂದಿತು. ಹಣವಿಲ್ಲದೆ ಮನಸ್ಸು ಅಶಾಂತವಾಯಿತು. ಅಪವಾದ, ಅವಮಾನ, ಆರ್ಥಿಕ ಸಂಕಷ್ಟ ಮತ್ತೆ ಉಂಟಾಗಿ ಜೀವನದಲ್ಲಿ ತಂದುಕೊಂಡಿದ್ದ ಧೈರ್ಯ ಸ್ಥೈರ್ಯ ಕುಂಟಿತು. ಕಂಗಾಲಾದ ದಾಸಪ್ಪ ಸಂಸಾರ ತೊರೆದು ಮತ್ತೆ ಕಾಶಿಯತ್ತ ಹೊರಟನು.

ಕ್ರಿ. ಶ. 1714ರಲ್ಲಿ ದಾಸಪ್ಪ ತಮ್ಮ 32ನೆಯ ವಯಸ್ಸಿನಲ್ಲಿ ಕಾಶಿಯಾತ್ರೆ ಹೊರಟಾಗ ಯಥಾಪ್ರಕಾರ ಇದ್ದಬದ್ದುದನ್ನೆಲ್ಲ ಕಳೆದುಕೊಂಡು ಕಾಶಿ ಸೇರಿ ಗಂಗೆಯಲ್ಲಿ ಮುಳುಗಿದನು. ಗಯೆಯಲ್ಲಿ ಪಿಂಡವನಿತ್ತು ಮರಳಿದನು. ಗಂಗಾನದಿಯ ದಡದಲ್ಲಿ ದಿನವೂ ಸ್ನಾನ, ವಿಶ್ವೇಶ್ವರನ ಧ್ಯಾನದಲ್ಲಿ ಕಾಲ ಕಳೆಯತೊಡಗಿದನು. ಈಗ ಸಾಕಷ್ಟು ಭಕ್ತನ ಲಕ್ಷಣಗಳನ್ನು ಹೊಂದಿದ್ದನÀು. ಸಜ್ಜನಸಂಗ, ಸದಾಚಾರ, ವಿಷಯ ವಿರಕ್ತಿ, ಗುರುಹಿರಿಯರಲ್ಲಿ ಭಕ್ತಿ, ಭಗವಂತನಲ್ಲಿ ಅನುರಕ್ತಿ ಇಂಥ ಗುಣಗಳಿರುವ ಭಕ್ತರಿಗೆ ತತ್ತ್ವಭಿಮಾನಿ ದೇವತೆಗಳು ಪ್ರಸನ್ನರಾಗುತ್ತಾರಂತೆ. ಪ್ರಾಣದೇವರು ಕೃಪೆದೋರಿ ಶ್ರೀ ಹರಿಯ ಒಲುಮೆ ದೊರೆಯುವ ಪಕ್ವತೆಗೆ ಭಕ್ತ ಬಂದಿರುತ್ತಾನೆ. ದಾಸಪ್ಪ ಅಂತಹ ಸ್ಥಿತಿಯನ್ನು ತಲುಪಿದ್ದನು.

ಒಂದು ದಿನ ಕಾಶಿಯಲ್ಲಿ ಗಂಗಾನದಿ ತೀರದ ಮಣಿಕರ್ಣಿಕಾ ಘಾಟಿನಲ್ಲಿ ಮಲಗಿದ್ದಾಗ ಅದ್ಭುತ ಸ್ವಪ್ನವೊಂದು ದಾಸಪ್ಪನಿಗೆ ಕಾಣಿಸಿತು. ಸ್ವಪ್ನದಲ್ಲಿ ಪುರಂದರದಾಸರೇ ಸಾಕ್ಷಾತ್ತಾಗಿ ಬಂದು ದಾಸಪ್ಪನ ಕೈಹಿಡಿದುಕೊಂಡು ಏಳಿಸಿ ವ್ಯಾಸಕಾಶಿಗೆ ಕರೆದೊಯ್ದು ಅಲ್ಲಿ ವೇದವ್ಯಾಸರ ದರ್ಶನ ಮಾಡಿಸಿ, ಮಧ್ವಶಾಸ್ತ್ರದ ತತ್ವೋಪದೇಶ ಕೇಳಿಸಿದಾಗ ವೇದವ್ಯಾಸರ ಅನುಗ್ರಹ ಆದಮೇಲೆ ಪುರಂದರದಾಸರು ದಾಸಪ್ಪನ ಬಾಯಿ ತೆಗೆಸಿ ನಾಲಿಗೆ ಮೇಲೆ ವಿಜಯವಿಠ್ಠಲ ಬೀಜಾಕ್ಷರಗಳನ್ನು ಬರೆದು ಅಂಕಿತ ಪ್ರದಾನ ಮಾಡಿದರು. ತಂಬೂರಿ, ತಾಳ ಗೆಜ್ಜೆಗಳನ್ನು ನೀಡಿ ಆಶೀರ್ವದಿಸಿದರು. ದಾಸಪ್ಪನ ಮನಸ್ಸಿನಲ್ಲಿದ್ದ ಅಶಾಂತಿ, ಆತಂಕ, ಚಿಂತೆ, ಕಳವಳಗಳೆಲ್ಲ ತೊಲಗಿ ಉತ್ಸಾಹ ತುಂಬಿತು, ಸ್ಫೂರ್ತಿ ಉಕ್ಕಿತು. ಭಕ್ತಿ e್ಞÁನ ವೈರಾಗ್ಯಗಳು ಮೈಗೂಡಿದವು. ಕಾಲಲ್ಲಿ ಗೆಜ್ಜೆಯನಾದ ಹೊಮ್ಮಿ, ಕೈಯಲ್ಲಿ ತಾಳ ತಟ್ಟಿ ಬೆರಳಲ್ಲಿ ತಂಬೂರಿ ಮೀಟಿ ಬಾಯಲ್ಲಿ ಶ್ರೀಹರಿಗಾನ ಚಿಮ್ಮಿ ದಾಸಪ್ಪ ವಿಜಯದಾಸರಾದರು. ``ಅಂತರಂಗದ ಕದವು ತೆರೆಯಿತಿಂದು ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ' ಎಂದು ಹಾಡುತ್ತಾ ಕಮಲಜಾದಿಗಳಿಂದ ತುತಿಸಿಕೊಳ್ಳುತ ಹೃದಯಕಮಲದೊಳಗಿರುವ ಶ್ರೀ ವಿಜಯವಿಠ್ಠಲನ ಕಂಡೆÉ ಎಂದು ನಲಿದಾಡಿದರು.

ಪುರಂದರದಾಸರಿಗೂ ವಿಜಯದಾಸರಿಗೂ ಜನ್ಮಾಂತರದ ಬಾಂಧವ್ಯ - ತಂದೆ ಮಕ್ಕಳ ಸಂಬಂಧವಿದೆಯೆಂದು ನಂಬಿಕೆ ಬೆಳೆದು ಬಂದಿದೆ. ವಿಜಯದಾಸರನ್ನು ಅವತಾರಪುರುಷರೆಂದೇ ಭಕ್ತರು ಭಾವಿಸುತ್ತಾರೆ. ವಿಜಯದಾಸರ ಮತ್ತು ಅವರ ಶಿಷ್ಯಪ್ರಶಿಷ್ಯರ ಸುಳಾದಿ ಕೀರ್ತನೆಗಳಲ್ಲಿ ಈ ಬಗೆಗೆ ಉಲ್ಲೇಖಗಳು ಸಿಗುತ್ತವೆ. ಇದರ ಪ್ರಕಾರ ತ್ರೇತಾಯುಗದಲ್ಲಿ ಸುರಲೀಲ ಎಂಬ ವಾನರಜನ್ಮ ಕಳೆದು ಯಾದವನಾಗಿ ಜನಿಸಿ ಶ್ರೀ ಕೃಷ್ಣನ ಸೇವೆಮಾಡಿ ಕಲಿಯುಗದಲ್ಲಿ ಪುರಂದರದಾಸರ ಮನೆಯಲ್ಲಿ ತುರುಕರುವಾಗಿ ಅನಂತರ ಮಧ್ವಪತಿದಾಸರಾಗಿ ಆಮೇಲೆ ವಿಜಯದಾಸರಾದರೆಂದು ಹೇಳಲಾಗಿದೆ. ಅಲ್ಲದೆ ಬ್ರಹ್ಮಪುತ್ರರಾದ ಶ್ರೀ ಭೃಗುಮಹರ್ಷಿ ಅವತಾರವೇ ವಿಜಯದಾಸರೆಂದು ನಾರದರ ಅವತಾರವೇ ಪುರಂದರದಾಸರೆಂದು ದಾಸಶ್ರೇಷ್ಠರೆಲ್ಲ ತಮ್ಮ ಕೀರ್ತನೆಗಳಲ್ಲಿ ಪದಪದ್ಯಗಳಲ್ಲಿ ಕೀರ್ತಿಸಿದ್ದಾರೆ. ವಿಜಯದಾಸರು ಶ್ರೀಶಾಪರೋಕ್ಷಿದಾಸರೆಂದು ಸಾರಿದ್ದಾರೆ.

ವಿಜಯದಾಸರಿಗೆ ಗುರುಕರುಣ ದೊರೆತ ಮೇಲೆ ಬೇಡ ಬೇಡವೆಂದರೂ ಅಪಾರ ಐಶ್ವರ್ಯ, ಮೇಣೆ, ಆನೆ, ಕುದುರೆ, ತುರು, ಕರು, ಪರಿಚಾರಕÀವರ್ಗ ಎಲ್ಲವೂ ದಾಸರಲ್ಲಿ ಮೇಳವಿಸಿತು. ತಮಗೆ ಬಂದುದ್ದನ್ನೆಲ್ಲ ಭಕ್ತರ ಕಷ್ಟ ನಿವಾರಣಕ್ಕೆ ಇಷ್ಟಪೂರಣಕ್ಕೆ ಕೃಷ್ಣಾರ್ಪಣವೆನ್ನುತ್ತ ಕೆರೆಯ ನೀರನ್ನು ಕೆರೆಗೆ ಚೆಲ್ಲಿದರು. ದಾಸರು ದಾಸರಾಗಿ ಉಳಿದರು, ಮುಂದಕ್ಕೆ ಹೊರಟರು. ವಿಜಯಯಾತ್ರೆ ಸಾಗಿತು, ಹೋದಲ್ಲೆಲ್ಲ ಜನ ದಾಸರ ಭಕ್ತಿಗಾಯನಕ್ಕೆ ದಿವ್ಯತೇಜಕ್ಕೆ ಅದ್ಭುತಾನುಗ್ರಹಕ್ಕೆ ಒಲಿದು ಬೆರಗಾದರು ಶರಣಾದರು. ದಾಸರ ದಾಸರಾದರು. ದಾಸರ ಶಿಷ್ಯವೃಂದ ಹೆಚ್ಚತೊಡಗಿತು. ದಾಸರ ಶಿಷ್ಯರೆಷ್ಟು ಎಂಬುದು ಖಚಿತವಿಲ್ಲ. ಗೋಪಾಲದಾಸರು ಪ್ರತ್ಯಕ್ಷವಾಗಿ ಹತ್ತಿಪ್ಪತ್ತು ಜನರಿಗೆ ತತ್ತ್ವೋಪದೇಶ ಮಾಡಿ ವಿಜಯರಾಯ.......... ಎನ್ನುತ್ತಾರೆ. ಹತ್ತಿಪ್ಪತ್ತು ಎಂಬ ಪದವನ್ನು ಕೆಲವರು 30 ಜನರೆಂದು ಅರ್ಥೈಸಿದ್ದರೆ ಮತ್ತೆ ಕೆಲವರು 20ಜನರೆಂದು ಅರ್ಥೈಸಿದ್ದಾರೆ. ಹೊನ್ನಾಳಿ ವೆಂಕಟದಾಸರು ಆರುಮೂರೆಡೊಂದು ಜನರು ಎಂದರೆ 37 ಜನವೆಂದು ತಮ್ಮ ಪದವೊಂದರಲ್ಲಿ ಹೇಳಿದ್ದಾರೆ. ಒಟ್ಟಿನಲ್ಲಿ ಸಾಕಷ್ಟು ಶಿಷ್ಯವರ್ಗ ದಾಸರಗಿತ್ತು ಎಂದು ತಿಳಿಯುತ್ತದೆ. ಇವರಲ್ಲಿ ಪ್ರಸಿದ್ಧರಾಗಿ ವಿಜಯದಾಸರಿಗೆ ತಕ್ಕ ಶಿಷ್ಯರೆನ್ನಿಸಿಕೊಂಡವರು ಕೆಲವರೇ. ಆ ಪೈಕಿ ಗೋಪಾಲದಾಸರು (ಭಾಗಣ್ಣ), ವೇಣುಗೋಪಾಲದಾಸರು, (ಪಂಗನಾಮ ತಿಮ್ಮಣ್ಣದಾಸರು) ಮೋಹನದಾಸರು ಪ್ರಸಿದ್ಧರು.

ರಾಯಚೂರು ಜಿಲ್ಲೆಯ ಮೊಸರÀುಕಲ್ ಎಂಬಲ್ಲಿ ಜನಿಸಿದ ಭಾಗಣ್ಣ ಬಾಲ್ಯದಲ್ಲಿ ಬಡತನವನ್ನೇ ಹಾಸಿ ಹೊದ್ದು ಬೆಳೆದನು. ಉಪನಯನವಾದಾಗ ಉಪದೇಶ ಮಾಡಿದ ಗಾಯತ್ರಿಯ ಮಂತ್ರವನ್ನು ಎರಡು ವರ್ಷ ಅಖಂಡವಾಗಿ ಪುರಶ್ಚರಣ ಮಾಡಿ ಸಿದ್ಧಿ ಪಡೆದನು. ಇದರ ಪರಿಣಾಮವಾಗಿ ನುಡಿದಿದ್ದೆಲ್ಲ ಸತ್ಯ. ಉಪದೇಶಿಸಿದ್ದೆಲ್ಲ ಪಥ್ಯ ಎಂಬಂತೆ ವಾಕ್ಸಿದ್ದಿ ಉಂಟಾಗಿ ಜನರಿಗೆ ತ್ರಿಕಾಲ ಸಂಗತಿಗಳನ್ನು ಭವಿಷ್ಯ ಹೇಳತೊಡಗಿದನು. ಪರಿಣಾಮವಾಗಿ ಜನಜಾತ್ರೆ ಸೇರಿ ಧನಕನಕರಾಶಿ ಸುರಿಯಿತು. ಕೀರ್ತಿ ಹಬ್ಬಿತು. ತಾಯಿ ತಮ್ಮಂದಿರೊಡನೆ ಜೀವನ ಸಾಗಿಸುತ್ತಾ ಈ ಮಧ್ಯೆ ವೆಂಕಟಕೃಷ್ಣ ಮುದ್ರಿಕೆಯಿಂದ ಅನೇಕ ದೇವರನಾಮಗಳನ್ನು ರಚಿಸುತ್ತಾ ಇರಲಾಗಿ ಸುದ್ದಿ ವಿಜಯದಾಸರ ಕಿವಿಗೆ ಬಿತ್ತು. ಭಾಗಣ್ಣ ತನ್ನ ಪೂರ್ವಜನ್ಮದ ಮತ್ತು ಈ ಜನ್ಮದ ಸುಕೃತವನ್ನು ಲೌಕಿಕ ಧನಕ್ಕೆ ಮಾರುತ್ತಿದ್ದಾನೆಂದು ಅರಿತರು.

ಭಾಗಣ್ಣನವರ ಬಳಿ ಬಂದ ವಿಜಯದಾಸರು ಇದೇನು ಅಂಗಡಿ ಇಟ್ಟುಕೊಂಡು ಪುಣ್ಯದ ಮಾರಾಟ ಮಾಡುತ್ತಿರುವೆ ಸಾಕುಮಾಡು ಎಂದರು. ಆ ಮಾತು ಕೇಳಿ ಭಾಗಣ್ಣನಿಗೆ e್ಞÁನೋದಯವಾಯಿತು. ಕ್ಷಮಿಸಿ ಅಪರಾಧವಾಯಿತು. ಇದೀಗ ನನ್ನ ಕಣ್ಣು ತೆರೆಯಿತು. ಮುಂದಿನ ದಾರಿ ತೋರಿಸಿ ಎಂದು ಶರಣಾದನು. ಆಗ ಭಾಗಣ್ಣನಿಗೆ ಗೋಪಾಲವಿಠ್ಠಲನೆಂದು ಅಂಕಿತನೀಡಿ ಉಪದೇಶ ಮಾಡಿ ಶಿಷ್ಯನಾಗಿ ಸ್ವೀಕರಿಸಿದರು. ಗೋಪಾಲದಾಸರೇ ವಿಜಯದಾಸರ ಮೊದಲ ಶಿಷ್ಯರಾದರು. ಗೋಪಾಲದಾಸರಿಗೆ ನೀಡಿದ ಅಂಕಿತದಲ್ಲಿ ಇವನನ್ನು ``ನಿನ್ನ ಅಚ್ಛಿನ್ನದಾಸರಲ್ಲಿರಿಸು ಗೋಪಾಲವಿಠ್ಠಲ ನಿನ್ನ ಪೂಜೆ ಮಾಡುವೆನೊ ಕಾಪಾಡು ಈ ಮಾತನು ನೀ ಪ್ರೀತಿಯನು ಮಾಡಿ ನಿಜದಾಸರೊಳಗಿಡು' ಎಂದು ವಿಜಯದಾಸರು ಬೇಡಿಕೊಂಡಿದ್ದಾರೆ. 'ಅಂಕಿತವ ನಾನಿತ್ತೆ ನಿನ್ನ ಪ್ರೇರಣೆಯಿಂದ' ಎಂದು ಹೇಳಿ ಭಾಗಣ್ಣನಿಗಾಗಿ ``ಕಿಂಕರರಿಗೆ ಲೌಕಿಕದ ಡೊಂಕನಡತಿಯ ಬಿಡಿಸಿ, ಜನುಮ ಜನುಮದಲ್ಲಿ ಪಂಕನಿಕರವ ತೊಲಗಿಸಿ ಶಂಕೆ ಪುಟ್ಟದಂತೆ ಕಾವ್ಯಗಳ ಪೇಳಿಪುದು' ಎಂದಿದ್ದಾರೆ. ವೆಂಕಟಕೃಷ್ಣ ಅಂಕಿತದಲ್ಲಿ ಪದ ರಚನೆ ಮಾಡುತ್ತಿದ್ದ ಭಾಗಣ್ಣನ ಕಾವ್ಯ ಶಕ್ತಿಯನ್ನು ನೆನೆದು ಕಾವ್ಯಗಳ ಪೇಳಿಪುದು ಎಂದಿದ್ದಾರೆ. ದಾಸರ ಸಹೃದಯತೆ ಎಷ್ಟು ಅಮೋಘವಾದುದು!

ವಿಜಯದಾಸರ ಮತ್ತೊಬ್ಬ ಪ್ರಸಿದ್ಧ ಶಿಷ್ಯರು ದಿವಾನ್ ತಿಮ್ಮಣ್ಣನವರು. ಆದವಾನಿಯ ನವಾಬ ಬಸಾಲತ್ ಜಂಗ್ ಎಂಬ ಸರದಾರನಲ್ಲಿ ದಿವಾನ ರಾಗಿದ್ದವರು ತಿಮ್ಮಣ್ಣನವರು. ಭಾಗಣ್ಣನವರು ಭವಿಷ್ಯ ಹೇಳಿ ಪ್ರಸಿದ್ಧರಾದಾಗ ಅವರ ಬಳಿ ಕೈಂಕರ್ಯಗೊಂಡು ಇದ್ದರು. ವಿಜಯದಾಸರ ಮಹಿಮೆಯನ್ನು ಕಂಡು ಬೆರಗಾದ ತಿಮ್ಮಣ್ಣನವರು ವಿಜಯದಾಸರ ಅನುಗ್ರಹಕ್ಕಾಗಿ ಕಾತರಿಸುತ್ತಿದ್ದರು. ಹೀಗಿರಲು ಒಮ್ಮೆ ವಿಜಯದಾಸರ ದರುಶನವಾದಾಗ ದಾಸರು ಏನು ಪಂಗನಾಮದ ತಿಮ್ಮಣ್ಣನವರೆ ಕ್ಷೇಮವೇ ಎಂದಾಗ ತಿಮ್ಮಣ್ಣನವರಿಗೆ ಜನ್ಮಾಂತರದ ಸ್ಮøತಿ ಉದ್ಬೋಧಗೊಂಡು ಹಿಂದಿನ ಜನ್ಮದಲ್ಲಿ ಶ್ರೀವೈಷ್ಣವಕುಲದ ಬೇಲೂರು ವೈಕುಂಠದಾಸರಾದುದು ಸ್ಮರಣೆಗೆ ಬಂತು. ಕಾಲಕ್ರಮೇಣ ವೇಣುಗೋಪಾಲವಿಠ್ಠಲ ಎಂಬ ಅಂಕಿತವನ್ನು ದಾಸರು ಅವರಿಗೆ ಅನುಗ್ರಹಿಸಿದರು. ಪೂರ್ವಜನ್ಮದ ಹೆಸರಿನಿಂದ ವಿಜಯದಾಸರು ಗುರುತಿಸಿದ್ದರಿಂದ ಪಂಗನಾಮ ತಿಮ್ಮಣ್ಣದಾಸರೆಂದೇ ಪ್ರಖ್ಯಾತಗೊಂಡರು.

ವಿಜಯದಾಸರ ಕೃಪಾಕಟಾಕ್ಷಕ್ಕೆ ಪಾತ್ರರಾದವರಲ್ಲಿ ಇನ್ನೊಬ್ಬ ಪ್ರಸಿದ್ಧ ಶಿಷ್ಯರೆಂದರೆ ಮೋಹನದಾಸರು. ಮೋಹನವಿಠಲ ಅಂಕಿತ ಹೊಂದಿದವರು. ಶ್ರೀ ವಿಜಯದಾಸರು ಪ್ರತಿವರ್ಷವೂ ಹಂಪೆಗೆ ಹೋಗಿ ಪುರಂದರದಾಸರ ಆರಾಧನೆಯನ್ನು ನಡೆಸುತ್ತಿದ್ದರು. e್ಞÁನದಾನ, ಅನ್ನದಾನ ಕಾರ್ಯಕ್ರ್ರಮಗಳನ್ನು ನಡೆಸುತ್ತಿದ್ದರು. ಆ e್ಞÁನಸತ್ರಕ್ಕೆ ಆನೆಗೊಂದಿಯ ಭೀಮಣ್ಣನಾಯಕನ ಹೆಂಡತಿ ತನ್ನ ಪತಿಯ ಅಣ್ಣತಮ್ಮಂದಿರು ತನ್ನ ಮೇಲೆ ಅಪಕೀರ್ತಿ ಹೊರೆಸಿ ಹೊರಹಾಕಿದ ಫಲವಾಗಿ ದಿಕ್ಕಿಲ್ಲದವಳಾಗಿ ಮೈತುಂಬ ಕಜ್ಜಿ, ಹುರುಕು ತುಂಬಿದ ಮಗುವಿನೊಂದಿಗೆ ಬಂದಿದ್ದಳು. ಜನರಿಂದ ದೂರೀಕರಿಸಿಕೊಂಡ ಅವಳನ್ನು ಅವಳ ಮಗುವನ್ನು ಕರುಣೆಯಿಂದ ನೋಡಿ ಹತ್ತಿರ ಬಂದು ಆಶೀರ್ವದಿಸಿ ವಿಜಯದಾಸರು ಅನುಗ್ರಹ ಮಾಡಿದರು. ಚಿರಂಜೀವಿಯಾಗೆಲವೊ ಚಿಣ್ಣದ ನೀನು ಹರಿದಾಸ ದಾಸರ ಪಾದಧೂಳಾಗಿ ಎಂದು ಹರಸಿದರು. ಆ ಮಗುವನ್ನು ತಾವೇ ಸಾಕಿ ದೊಡ್ಡವನನ್ನಾಗಿ ಮಾಡಿ ಮೋಹನವಿಠ್ಠಲ ಎಂದು ಅಂಕಿತದಾನಮಾಡಿದರು ಆ ಸಾಕುಮಗನೆ ಮೋಹನದಾಸರೆಂದು ಪ್ರಸಿದ್ಧರಾಗಿ ವಿಜಯದಾಸರ ಪರಂಪರೆಯನ್ನು ಮುಂದುವರೆಸಿದವರಲ್ಲಿ ಅಗ್ರಗಣ್ಯರೆನಿಸಿದರು.

ಹೀಗೆ ಭಕ್ತಿಯಲ್ಲಿ ಭಾಗಣ್ಣ, ಯುಕ್ತಿಯಲಿ ಮೋಹನ್ನ, ಶಕ್ತಿಯಲ್ಲಿ ತಿಮ್ಮಣ್ಣ ಎಂಬಂತೆ ಮೂವರು ಪ್ರಸಿದ್ಧ ಶಿಷ್ಯರು ವಿಜಯದಾಸರ ಅನುಗ್ರಹಕ್ಕೆ ಪಾತ್ರರಾಗಿ ಶಿಷ್ಯ ಪರಂಪರೆ ಬೆಳೆಸಿ ಇಂದೂ ದಾಸಸಾಹಿತ್ಯ ಉಳಿಯಲು ಬೆಳೆಯಲು ಕಾರಣಕರ್ತರಾಗಿದ್ದಾರೆ. ಇವರಲ್ಲದೆ ಇನ್ನೂ ಅನೇಕ ಶಿಷ್ಯರು ಇದ್ದು ಅವರಲ್ಲಿ ಇಬ್ಬರು ಶಿಷ್ಯರ ಸಂಗತಿ ಜಗಜ್ಜನಿತವಾಗಿದೆ. ಕೊಲ್ಲ್ಲೂರು ಸುಬ್ಬಣ್ಣಾಚಾರ್ಯರು ಆ ಪೈಕಿ ಒಬ್ಬರು. ಇವರು ಪಂಡಿತರಾಗಿದ್ದು ಸುಧಾಪಾಠ ಹೇಳುವಲ್ಲಿ ಸುಧೀರರೆಂದು ತಿಳಿದಿದ್ದರು. ವಿಜಯದಾಸರ ವಿಜಯ ವೈಭವದ ಬಗ್ಗೆ ಸಹನೆ ಇಲ್ಲದೆ ಕೂಸೀಮಗ ದಾಸನೆಂದು ದಾಸರನ್ನು ಹಂಗಿಸುತ್ತಿದ್ದರು. ಸುಧಾಮಂಗಳಕ್ಕೆ ಅಪೇಕ್ಷೆಪಟ್ಟಾಗ ನಿಮ್ಮಂಥ ದಾಸÀರಿಗೆ ಸುಧಾ ತಿಳಿಯಲು ಸಾಧ್ಯವೇ, ಇದೇನು ಕನ್ನಡದ ಪದ ಪದ್ಯವೇ ಎಂದು ಹೀಗಳೆದರು. ಆಗ ಅಲ್ಲಿದ್ದ ಪರಿಚಾರಕನೊಬ್ಬನಿಂದ ವಿಜಯದಾಸರು ಸುಧಾ ವ್ಯಾಖ್ಯಾನ ಮಾಡಿಸಿದಾಗ ಸುಬ್ಬಣ್ಣನವರ ಅಹಂ ಕರಗಿ e್ಞÁನೋದಯವಾಗಿ ದಾಸರಿಗೆ ಶರಣಾದರು. ಆಗ ವಿಜಯದಾಸರು ತಮ್ಮ ಶಿಷ್ಯರಾದ ಪಂಗನಾಮ ತಿಮ್ಮಣ್ಣದಾಸರಿಂದ ಸುಬ್ಬಣ್ಣಾಚಾರ್ಯರಿಗೆ ವ್ಯಾಸವಿಠ್ಠಲ ಎಂಬ ಅಂಕಿತವನ್ನು ಕರುಣಿಸಿದರು. ಇವರು ರಚಿಸಿದ ದೇವರನಾಮಗಳ ಪೈಕಿ ವಿಜಯಕವಚವೆಂದು ಪ್ರಸಿದ್ಧವಾದ ಕೀರ್ತನೆ ತುಂಬಾ ಜನಪ್ರಿಯ ಸ್ತೋತ್ರವಾಗಿದೆ. ಈ ಸ್ತೋತ್ರದಲ್ಲಿ ವಿಜಯದಾಸರನ್ನು ಕುರಿತು

``ಸ್ಮರಿಸಿ ಬದುಕಿರೊ ದಿವ್ಯ ಚರಣಕೆರಗಿರೊ

ದುರಿತ ತರಿದು ಪೊರೆವ ವಿಜಯ ಗುರುಗಳೆಂಬರ'

ಎಂದು ವ್ಯಾಸವಿಠ್ಠಲರು ಸಾರಿದ್ದಾರೆ.

ಶ್ರೀ ವಿಜಯದಾಸರು ಕಾಶಿಯಿಂದ ರಾಮೇಶ್ವರದವರೆಗೆ ಅನೇಕ ಬಾರಿ ಎಲ್ಲಾ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿದ್ದಾರೆ. ಹೋದ ಕಡೆಗಳೆಲ್ಲೆಲ್ಲಾ ಶ್ರೀಹರಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ಸ್ತೋತ್ರಗೈದು ಧನ್ಯರಾಗಿರದ್ದಾರೆ. ಎಷ್ಟೋ ಕಡೆ ಪವಾಡಗಳೆನ್ನಬಹುದಾದ ಘಟನೆಗಳು ಸಂಭವಿಸಿದೆ. ಕೆಲವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ತಿರುಪತಿ ತಿಮ್ಮಪ್ಪನಲ್ಲಿ ಅಪಾರ ಭಕ್ತಿ ದಾಸರಿಗೆ. ಅಲ್ಲಿಗೆ ಅದೆಷ್ಟೋ ಸಲ ಹೋಗಿ ಬಂದಿದ್ದಾರೆ ಲೆಕ್ಕವಿಲ್ಲ. ಒಮ್ಮೆ ತಿರುಪತಿಗೆ ಬಂದು ದೇವರ ದರ್ಶನಕ್ಕೆ ಪ್ರಯತ್ನಿಸಿದಾಗ ಅಂದು ರಥೋತ್ಸವದ ಪ್ರಯುಕ್ತ ನೂಕುನುಗ್ಗಲು ಹೆಚ್ಚಾಗಿತ್ತು. ಪರಿಚಾರಕರಿಂದ ಬೆನ್ನಿಗೆ ಪೆಟ್ಟು ತಿಂದು ಹಿಂದಕ್ಕೆ ಸರಿಯಬೇಕಾಯಿತು. ಆಗ ಹಾಡಿದ ಕೀರ್ತನೆ ಶ್ರೇಷ್ಠ ನಿಂದಾಸ್ತುತಿಯಾಗಿದೆ. ಭಕ್ತನ ಮೊರೆ ಜತೆಗೆ ಸಾಹಿತ್ಯದ ಸೊಗಸು ಈ ಕೀರ್ತನೆಯಲ್ಲಿ ಅಡಗಿದೆ. ಪ್ರಾರಂಭದ ಪಲ್ಲವಿಯೇ ಚೇತೋಹಾರಿಯಾಗಿದೆ. 

'ನಿನ್ನ ದರುಶನಕೆ ಬಂದವನಲ್ಲವೊ ಓ ದೇವಾ

ಪುಣ್ಯವಂತರ ದಿವ್ಯ ಚರಣ ನೋಡಲಿ ಬಂದೆ

ಏಕೆಂದರೆ ನೀನು ಭಕ್ತ ಪರಾಧೀನ ಭಕ್ತನೇ ಹೆಚ್ಚು'

ಆದ್ದರಿಂದ ಅವರೇ ಪುಣ್ಯವಂತರು ಅವರ ದರ್ಶನಕ್ಕೆ ಬಂದೆ ಎಂದರು. 'ಸೊಲ್ಲಿಗೆ ಸ್ತಂಭದಲಿ ತೋರಿದ ಮಹಾಮಹಿಮ ಎಲ್ಲಿಲ್ಲವೊ ನೀನು ! ಬಲ್ಲ ಭಕ್ತರಿಗೆ?'ಎಂದು ಸವಾಲು ಹಾಕಿದ್ದಾರೆ. ಹೀಗೆ ನೇರವಾಗಿ ಭಗವಂತನನ್ನೇ ಉದ್ದೇಶಿಸಿ ಮಾತನಾಡುವಂತೆ ಇರುವ ಈ ಕೀರ್ತನೆ ಎಲ್ಲರ ಮನಸೆಳೆಯುತ್ತದೆ. ವಿಜಯದಾಸರ ಪ್ರತಿಭೆ ಭಕ್ತಿ ಪಾಂಡಿತ್ಯಗಳಿಗೆ ನಿದರ್ಶನವಾಗಿದೆ.

ಬಹುಶಃ ದಾಸರು ತಿರುಪತಿಗೆ ಹೋದಾಗಲೆಲ್ಲ ಒಂದೊಂದು ಘಟನೆ ಸಂಭವಿಸಿರಬೇಕು. ಅವರ ಕೀರ್ತನೆಗಳಲ್ಲಿ ಕೆಲವು ಘಟನೆಗಳ ಉಲ್ಲೇಖವಷ್ಟೆ ಕಂಡುಬರುತ್ತದೆ. ಇನ್ನೊಮ್ಮೆ ವಿಜಯದಾಸರು ರಥೋತ್ಸವದಂದು ಉತ್ಸವ ಹೊರಟಾಗ ಎಲ್ಲರೂ ಹೊರಬಂದು ದೇವಸ್ಥಾನದಲ್ಲಿದ್ದ ಧ್ಯಾನಸ್ಥ ವಿಜಯದಾಸರನ್ನು ಯಾರು ಗಮನಿಸಲೇ ಇಲ್ಲ. ರಥ ಮುಂದೆ ಸಾಗದೇ ಇದ್ದಾಗ ಕೊನೆಗೆ ದಾಸರು ಗುಡಿಯಲ್ಲಿರುವುದನ್ನು ಅರಿತು ಅವರಲ್ಲಿ ಗುಡಿಯ ಅರ್ಚಕರು ಕ್ಷಮೆಯಾಚನೆ ಮಾಡಿದ ಮೇಲೆ ರಥ ಮುಂದಕ್ಕೆ ಸಾಗಿತಂತೆ. ಆಗ ದಾಸರ ಬಾಯಿಂದ, ಅಲ್ಲ ಹೃದಯದಿಂದ ಹೊರಟ ವಾಣಿ ಇದು.

ಸಾಗೀ ಬಾರಯ್ಯ ಭವರೋಗದ ವೈದ್ಯನೆ

ಬಾಗುವೆ ನಿನಗೆ ಚೆನ್ನಾಗಿ ಸ್ತುತಿಸಿ ಇಂದು

ಭಾಗೀರಥಿಪಿತ ಭಾಗವತರ ಸಂ

ಯೋಗ ರಂಗ ಉರಗಗಿರಿ ವೆಂಕಟ ಸಾಗಿ ಬಾರಯ್ಯ

ದಾಸರು ಪ್ರಾರ್ಥಿಸಿದ ಕೂಡಲೇ ರಥಮುಂದಕ್ಕೆ ಚಲಿಸಿತು ! ಇನ್ನೊಮ್ಮೆ ಪ್ರತ್ಯಕ್ಷ ದರ್ಶನ ಕೊಟ್ಟು ವರದ ಹಸ್ತವನ್ನು ಮಸ್ತಕದ ಮೇಲಿಟ್ಟು ಹರಸಿದಾಗ ``... ಮಸ್ತಕದಲಿ ಅಭಯಹಸ್ತವನಿಟ್ಟು ಬಲು ಅಸ್ತಮಾನ ಉದಯಾವಸ್ಥೆಯನು ಹರುಸುತ್ತಾ ....' ಎಂದು ಹಾಡಿದ್ದಾರೆ.

ಜಯಮಂಗಳಂ ನಿತ್ಯ ಶುಭಮಂಗಳಂ

ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಲುಂಬ.......

ಎಂಬ ಕೀರ್ತನೆಯು ವ್ಯಾಜಸ್ತುತಿ ಅಲಂಕಾರದಿಂದ ಕೂಡಿದ್ದು ಮತ್ತೊಂದು ಪ್ರಸಂಗವೊಂದನ್ನು ನೆನಪಿಸುತ್ತದೆ.

ದೇಗುಲಗಳ ಪುಣ್ಯಕ್ಷೇತ್ರಗಳ ದರ್ಶನ ಮಾಡಲು ಹೊರಟ ದಾಸರಿಗೆ ಆದ ಅನುಭವಗಳು ಅನೇಕಾನೇಕ. ಒಂದೊಂದು ಕಡೆ ಆದ ಅನುಭವ - ಘಟನೆಯು ಒಂದೊಂದು ತೆರ.

ಮನ್ನಾರ್ ಗುಡಿ ಕ್ಷೇತ್ರದಲ್ಲಿ ನದಿಯಲ್ಲಿ ಸ್ನಾನ ಮಾಡಲು ಹೊರಟಾಗ ಭಗವಂತ ಗೋಪಾಲ ವೇಷದಲ್ಲಿ ಬಂದು ದಾಸರೊಡನೆ ನೀರನ್ನು ಸಿಂಪಡಿಸಿ ಚೆಲ್ಲಾಟವಾಡಿ ಕೋಪ ಬರಿಸಿ e್ಞÁನೋದಯ ಉಂಟು ಮಾಡಿದ ಸಂದರ್ಭದಲ್ಲಿ ದಾಸರು ``ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ' ಎಂಬ ಕೀರ್ತನೆಯನ್ನು ರಚಿಸಿ ಕೃಷ್ಣನನ್ನು ಸ್ತುತಿಸಿದ್ದಾರೆ.

ಪಂಡರಾಪುರಕ್ಕೆ ಹೋದಾಗ ದಾಸರಿಗಾಗಿದ್ದು ಇನ್ನೊಂದು ತೆರನಾದ ಅನುಭವ. ಮಾರುವೇಷದಲ್ಲಿ ಬಂದಾಗ ಗುರುತಿಸಿ ಹಾಡಿದರು:`` ಚಲ್ಲಾಣ ಬಿಗಿವಿನಂದುಟ್ಟಾನೆ | ಮಾಸಿದ ವಸ್ತ್ರ ತೊಟ್ಟಾನೆ | ಕಾಲಲಿ ದಿಪ್ಪನ ಕೆರಹು ಮೆಟ್ಟಾನೇ' ಎಂದು ಕೊಂಡಾಡಿದಾಗ 'ಅಂಗದ ಮುಸುಕು ತೆಗೆದನೊ ಕ್ಷೇತ್ರದಿ ಪಾಂಡುರಂಗ ವಿಜಯರಾಯ' ಎಂದಿದ್ದಾರೆ. ಹೀಗೆ ದಾಸರು ಹೋದೆಡೆಗಳಲ್ಲೆಲ್ಲಾ ವಿಚಿತ್ರ ಘಟನೆಗಳು ನಡೆದು ಶ್ರೀಹರಿ ದಾಸÀರಿಗೆ ಕಾಣಿಸಿಕೊಂಡಿದ್ದಾನೆ. ಅವುಗಳ ಹಿನ್ನೆಲೆಯಲ್ಲಿ ಎಷ್ಟೋ ಕೀರ್ತನೆಗಳನ್ನು ದಾಸರು ರಚಿಸಿದ್ದಾರೆ. ದಾಸರು ಮೂರನೆಯ ಬಾರಿ ಕಾಶಿಯಾತ್ರೆ ನಡೆಸಿದಾಗ, ತುಂಗೆ ಉಕ್ಕಿ ಹರಿದಾಗ, ಮಂಡಗದ್ದೆ ಭೀಮನಿಂದ ಗೋಪಾಲದಾಸರಿಗೆ ರಕ್ಷಣೆ ನೀಡಲು ಉಗಾಭೋಗ ರಚಿಸಿದಾಗ, ಈ ಎಲ್ಲ ಸಂದರ್ಭಗಳಲ್ಲೂ ಪವಾಡ ಸದೃಶ ಘಟನೆಗಳು ನಡೆದಿವೆ. ಆಗೆಲ್ಲಾ ದಾಸರು ಹಾಡುಗಳನ್ನು ರಚಿಸಿದ್ದಾರೆ. ಹೀಗಾಗಿ ಅವರ ಎಷ್ಟೋ ಕೀರ್ತನೆಗಳು ಅವರ ಕ್ಷೇತ್ರಸಂಚಾರ ಮತ್ತು ಸಂಭವಿಸಿದ ಘಟನೆಗಳ ಹಿನ್ನೆಲೆಗಳನ್ನು ಒಳಗೊಂಡಿವೆ ಎನ್ನಬಹುದು.

ಶ್ರೀ ವಿಜಯದಾಸರಿಗಿದ್ದ ತಪೋಶಕ್ತಿ, ಶ್ರೀ ಹರಿಯ ಕೃಪಾಕಟಾಕ್ಷ, ಭಕ್ತರನ್ನು, ಮೊರೆಹೊಕ್ಕವರನ್ನು, ದೀನದಲಿತರನ್ನು ಉದಾರ ಹೃದಯದಿಂದ ಕರುಣಾಂತ- ರಂಗದಿಂದ ಉದ್ಧರಿಸುವ ಮನೋಭಾವ ಇವೇ ಮೊದಲಾದ ಶಕ್ತಿ- ಗುಣಗಳಿಂದ ಈ ಕಾಲದ ಜನ ನಂಬಲಾಗದ ಆದರೆ ವಿಜಯದಾಸರ ಜೀವಿತ ಕಾಲದಲ್ಲಿ ನಡೆದಿರಬಹುದಾದ ಹಲವಾರು ಅಪಮೃತ್ಯು ನಿವಾರಣಾ ಪ್ರಸಂಗಗಳು ಅವರ ಕೀರ್ತನೆ, ಸುಳಾದಿಗಳಲ್ಲಿ ಉಲ್ಲೇಖಗೊಂಡಿವೆ. ಅವುಗಳಲ್ಲಿ ಮುಖ್ಯವಾದ ಕೆಲವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

ವಿಜಯದಾಸರು ತಮ್ಮ ಮಗ ಶೇಷಗಿರಿಗೆ ಕಾಯಿಲೆಯಾಗಿ ಅಪಮೃತ್ಯು ಒದಗಿದಾಗ ಶ್ರೀಹರಿಯನ್ನು ಪ್ರಾರ್ಥಿಸಿ ಎರಡು ವರ್ಷ ಆಯುರ್ದಾನ ಮಾಡಿ ಬದುಕಿಸಿದರು. ಎರಡು ವರ್ಷಗಳ ನಂತರ ಕ್ರಿ. ಶ. 1751ರಲ್ಲಿ ಶೇಷಗಿರಿ ನಿಧನವಾದಾಗ ಹೆಂಡತಿ ಅರಳಮ್ಮನ ಶೋಕ ನಿವಾರಣೆಗಾಗಿ ಹಾಡುಗಳನ್ನು ರಚಿಸಿ ತತ್ತ್ವೋಪದೇಶ ಮಾಡಿ ಸಮಾಧಾನ ಮಾಡಿದರು. ಸಾಕುಮಗ ಮೋಹನದಾಸನಿಗೆ ಅಪಮೃತ್ಯು ಬಂದು ಅಕಾಲಮರಣ ಹೊಂದಿದಾಗ ಮತ್ತೆ ಜೀವ ಬರಿಸಿದರು. ಪುನರ್ಜನ್ಮವಿತ್ತರು. ತುಂಗಾತೀರದ ಚಾಗಿ ಎಂಬ ಊರಲ್ಲಿ ಶಿಷ್ಯರೊಡನೆ ವಿಜಯದಾಸರು ತಂಗಿರುವಾಗ ಕೇಶವರಾಯನೆಂಬ ವ್ಯಕ್ತಿ ನಿಧನವಾಗಿದ್ದನು. ಅವನ ಪತ್ನಿ ಮಹಾಮಹಿಮರು ವಿಜಯದಾಸರು ಬಂದಿದ್ದಾರೆಂದು ಎಂದು ಕೇಳಿ ತಿಳಿದು ಅವರು ಪತಿಯನ್ನು ಬದುಕಿಸಿಯಾರು ಎಂದು ಭಾವಿಸಿ ಅವರಲ್ಲಿ ಶರಣು ಹೋದಳು. ಪಾದಕ್ಕೆ ಅಡ್ಡ ಬಿದ್ದ ಆಕೆಗೆ ಸುಮಂಗಲೀಭವ ಎಂದು ಹರಿಸಿದಾಗ ಆಕೆ ನಡೆದ ಸಂಗತಿ ಹೇಳಿದಳು. ಹಲವಾರು ಉಗಾಭೋಗಗಳನ್ನು ರಚಿಸಿ ಭಗವಂತನನ್ನು ಪ್ರಾರ್ಥಿಸಿದರು. 'ನೀನೆ ನನ್ನ ಬಾಯಿಂದ ಸುಮಂಗಲೀಭವ ಎಂದು ನುಡಿಸಿರುವೆ ನೀನೇ ಈಗ ಕಾಪಾಡಬೇಕು' ಎಂದು ಪರಿಪರಿಯಾಗಿ ಸ್ತುತಿಸಿದರು ಮೂರು ವರ್ಷಗಳ ಆಯುರ್ದಾನದಿಂದ ಕೇಶವರಾಯ ಬದುಕಿ ಮೇಲೆದ್ದನು.

ಆದವಾನಿ ದಿವಾನರೂ ತಮ್ಮ ಶಿಷ್ಯರೂ ಆಗಿದ್ದ ವೇಣುಗೋಪಾಲದಾಸರಿಗೆ ಅಪಮೃತ್ಯು ಒದಗಿದಾಗ ವಿಜಯದಾಸರು ಮತ್ತು ಜೊತೆಯಲ್ಲಿದ್ದ ಗೋಪಾಲದಾಸರು ಇಬ್ಬರೂ ಶ್ರೀ ಹರಿಯನ್ನು ಪ್ರಾರ್ಥಿಸಿ ಪಂಗನಾಮ ತಿಮ್ಮಣ್ಣದಾಸರಿಗೆ ಪುನರ್ಜನ್ಮವನ್ನು ಶ್ರೀ ಹರಿ ಕರುಣಿಸುವಂತೆ ಮಾಡಿದರು.

ಜಗನ್ನಾಥದಾಸರ ಅಪಮೃತ್ಯು ನಿವಾರಣೆ ಮಾಡಿದ ಘಟನೆ ರೋಚಕವಾಗಿದೆ. ಮಾನವಿಯಲ್ಲಿದ್ದ ಶ್ರೀನಿವಾಸಾಚಾರ್ಯರೆಂಬ ಘನಪಂಡಿತರೂ ಶ್ರೀವರದೇಂದ್ರ ತೀರ್ಥರಲ್ಲಿ ವ್ಯಾಸಂಗ ಮಾಡಿದವರಾಗಿದ್ದು ವಿಜಯದಾಸರ ಕೀರ್ತಿ ಪ್ರಸಿದ್ಧಿ ಕೇಳಿ ನೋಡಿ ಅವರ ಬಗೆಗೆ ಅಸೂಯೆ ಪಡುತ್ತಿದ್ದರು, ತಿರಸ್ಕಾರವನ್ನು ತೋರುತ್ತಿದ್ದರು. ಕೂಸೀಮಗ ದಾಸನಿಗೆ ಇಷ್ಟೇಕೆ ಗೌರವ ಕನ್ನಡಪದÀ ಹಾಡಿದ್ದಕ್ಕೆ ಎನ್ನುತ್ತಿದ್ದರು. ಹೀಗಿರಲು ಒಮ್ಮೆ ದಾಸರು ಶ್ರೀನಿವಾಸಾಚಾರ್ಯರನ್ನು, ತೀರ್ಥಪ್ರಸಾದಕ್ಕೆ ಆಹ್ವಾನಿಸಿದಾಗ ಉದರಬೇನೆಯ ನೆಪ ಹೇಳಿ ತಪ್ಪಿಸಿಕೊಂಡರು. ಆದರೆ ನಿಜವಾಗಿ ಉದರಬೇನೆ ಉಂಟಾಯಿತು ಆಚಾರ್ಯರಿಗೆ. ಆಗ ಆಚಾರ್ಯರಿಗೆ ಅವರು ಮಾಡಿದ್ದು ತಪ್ಪೆಂದು ಮಂತ್ರಾಲಯದ ರಾಯರು ಹೇಳಿದಾಗ ಅವರಿಗೆ ತಮ್ಮ ತಪ್ಪಿನ ಅರ್ಥವಾಯಿತು. ಕೂಡಲೇ ವಿಜಯದಾಸರಲ್ಲಿ ಕ್ಷಮೆ ಕೋರಿದರು ಅವರ ಅಪ್ಪಣೆಯಂತೆ ಉತ್ತನೂರಿಗೆ ಹೋಗಿ ಗೋಪಾಲದಾಸರನ್ನು ಶರಣು ಹೋಗಿ ಉದರಬೇನೆ ನಿವಾರಣೆಗಾಗಿ ಪ್ರಾರ್ಥಿಸಿದರು. ವಿಜಯದಾಸರ ಅಪ್ಪಣೆಯನ್ನು ಶಿರಸಾ ಪಾಲಿಸುತ್ತಿದ್ದ ಗೋಪಾಲದಾಸರು ``ಎನ್ನ ಬಿನ್ನಪ ಕೇಳೊ ಧನ್ವಂತ್ರಿ ದಯಮಾಡೊ ಸಣ್ಣವನು ಇವ ಕೇವಲ' ಎಂದು ಹೇಳುತ್ತಾ ``ಬನ್ನ ಪಡಿಸುವ ರೋಗವನ್ನು ಮೋಚನಮಾಡಿ ಚನ್ನಾಗಿ ಪಾಲಿಸುವುದು ಕರುಣಿ' ಎಂದು ಧನ್ವಂತರಿ ಸ್ತುತಿ ಮಾಡಿ ಮಂತ್ರದಿಂದ ಆಭಿಮಂತ್ರಿಸಿಕೊಟ್ಟ ಎರಡು ಜೋಳದ ರೊಟ್ಟಿ ಭೋಜನದಿಂದ ಆಚಾರ್ಯರ ಉದರವ್ಯಾಧಿ ನಿವಾರಣೆ ಆಯಿತು. ಮುಂದೆ ತಿರುಪತಿಯಲ್ಲಿ ವ್ಯಾಧಿ ಮರುಕಳಿಸಿದಾಗ ಅಲ್ಲೇ ಇದ್ದ ಗೋಪಾಲದಾಸರು ಸೂಕ್ಷ್ಮರೂಪದಲ್ಲಿ ಬಂದು ವಿಜಯದಾಸರು ನೀಡಿದ ಆe್ಞÁರೂಪದಲ್ಲಿ ತಮ್ಮ ಆಯುಷ್ಯsದಲ್ಲಿನ ನಲವತ್ತು ವರ್ಷಗಳನ್ನು ಆಚಾರ್ಯರಿಗೆ ಧಾರೆ ಎರೆದರು. ಕಾಲಕ್ರಮದಲ್ಲಿ ಶ್ರೀನಿವಾಸಾಚಾರ್ಯರಿಗೆ ಚಂದ್ರಭಾಗಾ ನದಿಯಲ್ಲಿ ಜಗನ್ನಾಥವಿಠ್ಠಲ ಎಂಬ ಶಿಲೆದೊರೆತು ದೀಕ್ಷಾಬಧ್ಧರಾಗಿ ಜಗನ್ನಾಥದಾಸರೆಂದು ಪ್ರಸಿದ್ಧರಾಗಿ ಜಗನ್ನಾಥವಿಠ್ಠಲ ಅಂಕಿತದಲ್ಲಿ ಹರಿಕಥಾಮೃತಸಾರವೆಂಬ ಕನ್ನಡದ ಶ್ರೇಷ್ಠ ತತ್ವಗ್ರಂಥವನ್ನು ರಚಿಸಿ ಲೋಕವಿಖ್ಯಾತರಾದರು. ಹೀಗೆ ವಿಜಯದಾಸರಿಂದ ಅಪಮೃತ್ಯು ನಿವಾರಣೆ ಆಗಿ ಗೋಪಾಲದಾಸರ ಮೂಲಕ ಕನ್ನಡಕ್ಕೆ ಜಗನ್ನಾಥ ದಾಸರು ಲಭ್ಯವಾದರು.

ವಿಜಯದಾಸರು ತಮ್ಮ ಜೀವಿತ ಕಾಲದಲ್ಲಿ ಸುಮಾರು 18 ವರ್ಷಗಳ ಕಾಲ ಭಾರತಾದ್ಯಂತ ಸಂಚರಿಸಿ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿದ್ದಾರೆ. ಭಕ್ತರಿಗೆ ಮಾರ್ಗದರ್ಶನ ಮಾಡಿದ್ದಾರೆ. ಕೊನೆಗಾಲದಲ್ಲಿ ಆಂಧ್ರ ಪ್ರದೇಶದ ಗುಂತಕಲ್ ಬಳಿ ಇರುವ ಚಿಪ್ಪಗಿರಿಗೆ ಬಂದು ನೆಲಸಿದರು. ಈ ಸ್ಥಳ ಭಾಸ್ಕರ ಕ್ಷೇತ್ರವೆಂದು ಪ್ರಸಿದ್ಧಿ ಹೊಂದಿತ್ತು. ಇಲ್ಲಿ ನೆಲೆಸಲು ಬಂದಾಗ ನಡೆದ ಘಟನೆಯೊಂದು ಗಮನಾರ್ಹವಾಗಿದೆ.

ಚಂದಪ್ಪನೆಂಬ ಕುರುಬನೊಬ್ಬನ ಹೊಲದ ಬಾವಿಯಲ್ಲಿದ್ದ ಶ್ರೀವೇಣು-ಗೋಪಾಲಕೃಷ್ಣ ವಿಗ್ರಹವನ್ನು ತೆಗೆಸಿ, ಅಲ್ಲಿಯೇ ಸಣ್ಣಕಟ್ಟೆ ಕಟ್ಟಿ ವೃಕ್ಷದಡಿ ಪ್ರತಿಷ್ಠಾಪನೆ ಮಾಡಿದರು. ಚಂದಪ್ಪನು ದಾಸರ ಮಹಿಮಾತಿಯನ್ನು ನೋಡಿ ಇಪ್ಪತ್ತು ಕೂರಗಿ ಹೊಲವನ್ನು ಒಂದು ಕೊಪ್ಪರಿಗೆ ತುಂಬ ಹಣವನ್ನು ದಾನಮಾಡಿದ. ಆ ಬಾವಿಯನ್ನು ಜೀರ್ಣೊದ್ಧಾರಗೊಳಿಸಿದರು. ವಿಜಯ ತೀರ್ಥವೆಂದು ಅದು ಪ್ರಸಿದ್ಧವಾಗಿದೆ. ಇವು ಈಗಲೂ ವಿಜಯದಾಸರ ವಂಶಸ್ಥರಿಗೆ ಸೇರಿದೆ. ಚಿಪ್ಪಗಿರಿಯಲ್ಲಿ ನೆಲೆಸಿ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಾ ಭಗವಂತನ ಧ್ಯಾನದಲ್ಲಿ ನಿರತರಾಗಿರುತ್ತ ತಮ್ಮ ಎಪ್ಪತ್ತಮೂರನೆಯ ವಯಸ್ಸಿನಲ್ಲಿ ತಿರುಪತಿಯ ಬ್ರಹ್ಮೋತ್ಸವಕ್ಕೆ ಯಾತ್ರೆ ಹೋಗಿ ಬಂದವರು ಕ್ರಿ. ಶ. 13-11-1755 ರಲ್ಲಿ ಯುವ ಸಂವತ್ಸರದ ಶಕ 1677 ರಲ್ಲಿ ಕಾರ್ತೀಕ ಶುಧ್ಧ ದಶಮಿ ಗುರುವಾರ ಪ್ರಹರದಲ್ಲಿ ಶ್ರೀ ಹರಿಪಾದವನ್ನು ಸೇರಿದರು. ಪ್ರತಿವರ್ಷ ಕಾರ್ತೀಕ ಶುದ್ದ ನವಮಿ ದಶಮಿ ಏಕಾದಶಿಗಳಂದು ಚಿಪ್ಪಗಿರಿಯಲ್ಲಿ ವಿಜಯದಾಸರ ಆರಾಧನೆಯನ್ನು ಭಕ್ತರು ನಡೆಸುತ್ತಾರೆ. ವಿಜಯದಾಸರನ್ನು ಅವರ ಮಹಿಮಾತಿಶಯಗಳನ್ನು ಅವರ ಶಿಷ್ಯರು ಪ್ರಶಿಷ್ಯರು ಬಗೆ ಬಗೆಯಾಗಿ ಕೊಂಡಾಡಿದ್ದಾರೆ. ಪಂಡಿತ ಪಂಡರೀನಾಥಾಚಾರ್ಯ ಗಲಗಲಿ ಅವರು ಹೇಳಿದಂತೆ ಶ್ರೀ ಪುರಂದರದಾಸರು ಶ್ರೀ ವಾದಿರಾಜ ಕನಕದಾಸರೊಂದಿಗೆ ದಿವ್ಯ ಭವ್ಯವಾಗಿ ಆ ದಾಸಪರಂಪರೆ ಗುಡಿ ಕಟ್ಟಿಸಿದರೆ ಮುಂದೆ ವಿಜಯದಾಸರು ಅದಕ್ಕೆ ಶಿಖರವಿಟ್ಟರು. ಶ್ರೀ ಗೋಪಾಲದಾಸರು ಕಲಶ ಏರಿಸಿದರು. ಅನಂತರ ಶ್ರೀ ಜಗನ್ನಾಥದಾಸರು ದಾಸಕೂಟದ ಗೌರವ ಘನತೆಗಳನ್ನು ಗಗನದೆತ್ತ್ತರಕ್ಕೆ ಎತ್ತಿದರು. ತದನಂತರ ಬಂದ ದಾಸವರೇಣ್ಯರೆಲ್ಲರೂ ಆ ದಾಸಪ್ರಾಸಾದನವನ್ನು ತಮ್ಮ ವಿವಿಧ ವಾಙ್ಮಯ ಪ್ರಾಕಾರಗಳಿಂದ ಶೃಂಗರಿಸಿ ಅಲಂಕರಿಸುತ್ತಲೇ ಇದ್ದಾರೆ. ಈ ರೀತಿಯಾಗಿ ದಾಸಪಂಥವೆಂಬ ದಿವ್ಯದೇಗುಲ ನಿರ್ಮಾಣದಲ್ಲಿ ಶ್ರೀ ವಿಜಯದಾಸರು ಮಹತ್ವದ ಪಾತ್ರವಹಿಸಿ ಕನ್ನಡ ದಾಸಸಾಹಿತ್ಯದ ರೂವಾರಿಗಳಲ್ಲಿ ಒಬ್ಬರಾಗಿದ್ದಾರೆ.

ವಿಜಯದಾಸರ ಕೀರ್ತನೆಗಳು - ಒಂದುನೋಟ

ದಾಸಸಾಹಿತ್ಯದ ಪುನರುತ್ಥಾನದ ಕಾರ್ಯದಲ್ಲಿ ವಿಜಯದಾಸರು ಅಗ್ರಗಣ್ಯರಾಗಿ ದಾಸಕೂಟದ ಪರಂಪರೆಯನ್ನು ಎರಡನೇ ಘಟ್ಟದಲ್ಲಿ ಮುಂದುವರೆಸಿದ್ದಾರೆ. ವ್ಯಾಸಕೂಟದ ಪರಂಪರೆಯನ್ನು ಶ್ರೀ ರಾಘವೇಂದ್ರಸ್ವಾಮಿಗಳು&ಟಿbsಠಿ;ಮುಂದುವರೆಸಿದ್ದಾರೆ. ಯತಿಗಳೇ ಇರಲಿ ದಾಸರೇ ಇರಲಿ ಶಾಸ್ತ್ರಗ್ರಂಥಗಳನ್ನು ಸಂಸ್ಕøತದಲ್ಲಿ ರಚಿಸಿರಲಿ, ದೇವರನಾಮಗಳನ್ನು ಕನ್ನಡದಲ್ಲಿ ರಚಿಸಿರಲಿ ಇಬ್ಬರ ಗುರಿಯೂ ಒಂದೇ. ಭಕ್ತಿಮಾರ್ಗದ ಅನುಸರಣೆ, ಮಧ್ವಸಿದ್ಧಾಂತದ ಪ್ರಚುರಣೆ. ಫಲಾಪೇಕ್ಷೆಯಿಲ್ಲದೆ ಲೋಕಕಲ್ಯಾಣಕ್ಕಾಗಿ ಭಗವಂತನ ಪ್ರೀತ್ಯರ್ಥವಾಗಿ ಕಾಯಕದ ಆಚರಣೆ. ಒಟ್ಟಿನಲ್ಲಿ ಪೂಜೆ, ಸೇವೆ, ಕೀರ್ತನೆ, ಶಾಸ್ತ್ರಗ್ರಂಥರಚನೆ ಹರಿದಾಸರ ಹರಿಯತಿಗಳ ಮುಖ್ಯ ಗುರಿಯಾಗಿತ್ತು.

ಕೀರ್ತನೆ, ಸುಳಾದಿ, ಉಗಾಭೋಗ ಮೊದಲಾದ ದಾಸಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಶ್ರೀ ವಿಜಯದಾಸರು, ವ್ಯಾಸÀರಾಜರ ಯತಿ ಪರಂಪರೆಯನ್ನು ಶ್ರೀರಾಘವೆಂದ್ರಸ್ವಾಮಿಗಳು ಮುಂದುವರೆಸಿದÀಂತೆ, ಪುರಂದರದಾಸರು ಕೀರ್ತನೆ ಪರಂಪರೆಯನ್ನು ಅವರ ಉತ್ತರಾಧಿಕಾರಿಗಳೊ ಎಂಬಂತೆ ವರ್ತಿಸಿ ಮುಂದುವರೆಸಿದ್ದಾರೆ. ಪುರಂದರದಾಸರು ರಚಿಸಿದ್ದು 4 ಲಕ್ಷ 25 ಸಾವಿರ ಪದಗಳೆಂದು ತಾವು ತಿರಿಪಾದೋನ ಪಂಚಲಕ್ಷ ಪೇಳಿಹೆ (ಎಂದರೆ 75 ಸಾವಿರ ಪದಗಳು) ಎಂದಿದ್ದಾರೆ. ಆದ ಕಾರಣ 5 ಲಕ್ಷ ಪದಗಳ ರಚನೆಯನ್ನು ಪೂರೈಸಬೇಕೆಂಬ ಪುರಂದರದಾಸರ ಆಸೆಯನ್ನು ವಿಜಯದಾಸರು ಪೂರೈಸಿದರು ಎನ್ನುವರು. ಆಭಿನವ ಪುರಂದರದಾಸರೆಂಬ ಆಭಿದಾನಕ್ಕೆ ವಿಜಯದಾಸರು ಪಾತ್ರರಾಗಿದ್ದಾರೆ. ಇನ್ನೊಂದು ದೃಷ್ಟಿಯಿಂದಲೂ ಪುರಂದರ ಪರಿವಾರಕ್ಕೆ ಸೇರಿದವರು ವಿಜಯದಾಸರು. ಏಕೆಂದರೆ ಪುರಂದರದಾಸರ ಮಕ್ಕಳಲ್ಲಿ ಒಬ್ಬರಾದ ಮಧ್ವಪತಿವಿಠಲರೇ ಈ ಜನ್ಮದಲ್ಲಿ ವಿಜಯದಾಸರಾಗಿದ್ದಾರೆಂಬ ಪ್ರತೀತಿಯಿದೆ. ಜನಪ್ರಿಯತೆ ದೃಷ್ಟಿಯಿಂದಲೂ ಪುರಂದರರ ನಂತರ ವಿಜಯದಾಸರು ಸ್ಥಾನಗಳಿಸಿದ್ದಾರೆ ಎಂದರೂ ತಪ್ಪಾಗಲಾರದು. ಒಟ್ಟಿನಲ್ಲಿ ಕೀರ್ತನ ಸಾಹಿತ್ಯ ಜಗತ್ತಿನಲ್ಲಿ ವಿಜಯದಾಸರು ವಿಶಿಷ್ಟ ಸ್ಥಾನವನ್ನು ಗಳಿಸಿದ್ದಾರೆ ಎಂಬುದರಲ್ಲಿ ಸಂಶಯವಿಲ್ಲ.

ವಿಜಯದಾಸರ ಕೀರ್ತನೆ, ಉಗಾಭೋಗ, ಸುಳಾದಿಗಳಲ್ಲಿ (ಉಗಾಭೋಗ ಮತ್ತು ಸುಳಾದಿಗಳನ್ನು ಕುರಿತು ಬೇರೆಡೆ ಸಂಪುಟದಲ್ಲಿ ಚರ್ಚಿಸಿ ವಿವರಿಸಿರುವುದರಿಂದ ಇಲ್ಲಿ ಕೇವಲ ಕೀರ್ತನೆಗಳನ್ನು ಕುರಿತಷ್ಟೇ ನಾಲ್ಕು ಮಾತುಗಳನ್ನು ಹೇಳಲಾಗಿದೆ.) ಹತ್ತಾರು ಕೀರ್ತನೆಗಳ ವೈಶಿಷ್ಟ್ಯ ವಿವರಣೆಗಳನ್ನು ಆಯಾ ಕೀರ್ತನೆಗÀಳ ಟಿಪ್ಪಣಿಗಳಲ್ಲಿ ಕಾಣಿಸಲಾಗಿದೆ. ಸಮಗ್ರ ದೃಷ್ಟಿಯಿಂದ ಕೆಲವು ಮಾತುಗಳನ್ನು ಇಲ್ಲಿ ಹೇಳಲಾಗಿದೆ.

ಸಾಮಾನ್ಯವಾಗಿ ಕೀರ್ತನೆಗಳಲ್ಲಿ ರಾಗತಾಳ ಬದ್ಧವಾಗಿ ಪಲ್ಲವಿ, ಅನುಪಲ್ಲವಿ ಮತ್ತು ಚರಣ ಅಥವಾ ನುಡಿಗಳ ಯೋಜನೆ ಇರುತ್ತದೆ. ಕೊನೆಯಲ್ಲಿ ಆಯಾ ದಾಸರ ಅಂಕಿತವಿರುತ್ತದೆ. ಬಹುಮಟ್ಟಿಗೆ ಹರಿದಾಸರೆಲ್ಲರೂ ವಿಠಲನ ಭಕ್ತರು. ತಮ್ಮ ಸ್ವರೂಪ ಗುರುಗಳ ಹೆಸರಿನೊಂದಿಗೆ ವಿಠಲನೆಂಬ ನಾಮವನ್ನು ಸೇರಿಸಿಕೊಂಡು ಅಂಕಿತ ಹೊಂದುತ್ತಾರೆ. ಹರಿದಾಸರನ್ನು ಮೂರು ನಾಮಧಾರಿಗಳೆಂದು ಕರೆಯುವುದುಂಟು ಏಕೆಂದರೆ ಸಂಪ್ರ್ರದಾಯದಲ್ಲಿ ದಾಸರಿಗೆ ಇಹಜನ್ಮನಾಮ, ಪೂರ್ವಜನ್ಮನಾಮ, ಉಪದೇಶದ ಅಂಕಿತನಾಮ ಇರುತ್ತದೆ. ವಿಜಯದಾಸರಿಗೆ ಇಹಜನ್ಮನಾಮ ದಾಸಪ್ಪ ಎಂದು ಅಂಕಿತನಾಮ ವಿಜಯವಿಠಲನೆಂಬ ಪೂರ್ವಜನ್ಮನಾಮ ಮಧ್ವಪತಿವಿಠಲನೆಂದೂ ಇತ್ತು.

ವಿಜಯದಾಸರ ಕೀರ್ತನೆಗಳ ವಸ್ತು ವೈವಿಧ್ಯ ವಿಸ್ತಾರವಾದುದು. ಹತ್ತಾರು ಬಾರಿ ಆಸೇತು ಹಿಮಾಚಲ ಪರ್ಯಂತ ಸಂಚರಿಸಿರುವುದರಿಂದ ಅವರ ಲೋಕಾನುಭವ ಅಧಿಕವಾದುದು. ಅಪರೋಕ್ಷ ಲೋಕe್ಞÁನಿಗಳೂ ಆಗಿರುವುದರಿಂದ e್ಞÁನವಿಸ್ತಾರ ಅಪಾರ. ಇನ್ನು ಶಾಸ್ತ್ರ, ಸಂಪ್ರದಾಯ, ಆಚರಣೆಗಳ ವಿಚಾರದಲ್ಲಿ ಅವರನ್ನು ಸರಿಗಟ್ಟುವವರೇ ಕಮ್ಮಿ. ದೇವಕಕ್ಷೆಯಲ್ಲಿ ಸುಮಾರು 20 ದೇವಾನುದೇವತೆಗಳನ್ನು ಸ್ತುತಿಸಿದರೆ ಯತಿಕಕ್ಷೆಯಲ್ಲಿ 10 ಮಂದಿ ಯತಿವರೇಣ್ಯರನ್ನು ಸ್ತುತಿಸಿದ್ದಾರೆ. ಆತ್ಮನಿವೇದನೆ, ಲೋಕನೀತಿಗಳ ಬಗ್ಗೆ ಸಾಕಷ್ಟು ಕೀರ್ತನೆಗಳಿವೆ. ಕ್ಷೇತ್ರಗಳ ಬಗ್ಗೆ ನದಿನದಗಳ ಬಗ್ಗೆ ಸಾಕಷ್ಟು ಕೀರ್ತನೆಗಳನ್ನು ರಚಿಸಿದ ಹರಿದಾಸರು ಜಾಸ್ತಿ ಜನ ಇಲ್ಲವೆಂದರೆ ತಪ್ಪಾಗದು. ಒಟ್ಟಿನಲ್ಲಿ ಶಾಸ್ತ್ರe್ಞÁನ ಸಾಹಿತ್ಯ ಮಾಧುರ್ಯ - ಲೋಕಾನುಭವ ಮುಂತಾದವುಗಳ ಸಂಗಮಕ್ಷೇತ್ರ ವಿಜಯದಾಸರ ಕೀರ್ತನೆಗಳು.

ವಿಜಯದಾಸರು 75000 ಪದಗಳನ್ನು ರಚಿಸಿದ್ದರೂ ಈಗ ಉಪಲಬ್ಧವಿರುವ ಅವರ ಕೀರ್ತನೆಗಳು ಎಲ್ಲಾ ಸೇರಿದರೂ 2000 ಸಹ ಆಗುವುದಿಲ್ಲ. ಲಭ್ಯವಿರುವ ಸಾಹಿತ್ಯವೂ ಸಮಗ್ರವಾಗಿ ಒಂದೆಡೆ ಸಿಗುವುದಿಲ್ಲ. ಈ ದೆಸೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯದವರು ಸಮಗ್ರ ದಾಸವಾಙ್ಮಯವನ್ನು ಪ್ರಕಟಿಸುವ ಕಾರ್ಯವನ್ನು ಕೈಗೆತ್ತಿಕೊಂಡಿರುವುದು ಶ್ಲಾಘನೀಯವೇ ಸರಿ. ದಾಸಸಾಹಿತ್ಯದ ಪ್ರಭಾವ 20ನೇ ಶತಮಾನದಲ್ಲಿ ಆಧುನಿಕ ಕನ್ನಡ ಸಾಹಿತ್ಯದÀ ಮೇಲೂ ಪ್ರಭಾವ ಬೀರಿ ಹರಿದಾಸೇತರರೂ ಕೀರ್ತನ ಸಾಹಿತ್ಯ ರಚಿಸಿರುವುದು ಗಮನಾರ್ಹ ಸಂಗತಿಯಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಕೀರ್ತನಸಾಹಿತ್ಯದ ಮತ್ತು ಸುಳಾದಿಗಳ ಹಾಗೂ ಸಂಕ್ಷಿಪ್ತ ರಚನೆಗಳಾದ ಉಗಾಭೋಗ ಮತ್ತು ಇತರ ಸಾಹಿತ್ಯ ಪ್ರಕಾರಗಳಲ್ಲಿ ಕಂಡುಬರುವ ಗೇಯಗುಣ, ಸಾಹಿತ್ಯದ ಸೊಗಸು, ಭಾಷಾವೈಖರಿ, ಛಂದೋರಚನೆ, ಲಯವಿನ್ಯಾಸ ಇತ್ಯಾದಿ ಅಂಶಗಳು ಇತರರ ಮನಸೆಳೆದಿವೆ. ಇನ್ನು ವಸ್ತುವಿನ ದೃಷ್ಟಿಯಲ್ಲಿ ಆತ್ಮನಿವೇದನೆ ಲೋಕನೀತಿ, ಹರಿಸ್ತುತಿ ಮೊದಲಾದವು ಸಾರ್ವಕಾಲಿಕ ಅಂಶಗಳನ್ನು ಒಳಗೊಂಡಿವೆ. ಹೊಸಗನ್ನಡ ಕವಿಗಳ ಕವಿತೆಗಳಲ್ಲಿ ಹೊಸವೇಷದಲ್ಲಿ ಕೀರ್ತನ ಸಾಹಿತ್ಯ ಮೂಡಿ ಬಂದಿರುವುದು ಚಿಕಿತ್ಸಕ ಬುಧ್ಧಿಗೆ ಥsÀಟ್ಟನೆ ಹೊಳೆಯುತ್ತದೆ. ಡಿವಿಜಿ, ಬೇಂದ್ರೆ, ಕುವೆಂಪು, ಪುತಿನ, ಮಾಸ್ತಿ, ಕೆ.ಎಸ್.ನ ವಿಸೀ, ಎಕ್ಕುಂಡಿ ಮೊದಲಾದವರ ಕವಿತಾರಚನೆಗಳು ಇದಕ್ಕೆ ನಿದರ್ಶನಗಳನ್ನು ನೀಡುತ್ತವೆ.

ದಾಸರ ಕೀರ್ತನೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Image result for ಕೀರ್ತನೆಗಳು


ಕೃಪೆ: 

https://kn.wikipedia.org



No comments:

Post a Comment