ಕನ್ನಡ ನಾಡ ನುಡಿ
ಭಾಷೆ ಸಂವಾಹನದ ವಾಹಕ. ಅದು ಇಲ್ಲದೆ ಯಾವುದೇ ಒಂದು ಪ್ರಾಣಿ ಸಂವಾಹಿಸಲು ಸಾಧ್ಯವಿಲ್ಲ. ಮಾನವ ಇತರೆ ಪ್ರಾಣಿಗಳಿಗಿಂತ ಭಿನ್ನ ರೀತಿಯ ಸಂವಾಹನದ ಮೂಲಕ ಮತ್ತೊಬ್ಬ ಮಾನವನೊಡನೆ ಸಂವಾಹಿಸಲು ವಿಶಿಷ್ಟವಾದ ಭಾಷೆಗಳನ್ನು ರೂಪಿಸಿಕೊಂಡಿದ್ದಾನೆ. ಭಾಷೆ ಎಂಬುವುದು ಕೇವಲ ಸಂವಾಹನಕ್ಕೆ ಅವಶ್ಯವಾದ ಮಾಧ್ಯಮವೆ ಆದರೂ, ವ್ಯಕ್ತಿಯ ಭಾವನೆಗಳು ಹೊರ ಹೊಮ್ಮಲು ಇರುವ ವಾಹಕವೂ ಸಹ ಆಗಿದೆ. ಪ್ರಪಂಚದಲ್ಲಿ, ಅನೇಕ ಜನರುನಿರ್ದಿಷ್ಟವಾದ ಪ್ರದೇಶದೊಳಗೆ ಒಂದು ನಿರ್ದಿಷ್ಟವಾದ ಭಾಷೆಯ ಮೂಲಕ ದೈನಂದಿನ ಚಟುವಟಿಕೆಗಳಿಗಾಗಿ ಮಾತು, ಬರಹಗಳ ಮೂಲಕ ವ್ಯವಹರಿಸುತ್ತಿದ್ದಾರೆ. ಇಂತಹ ಭಾಷೆಗಳಲ್ಲಿ ಕನ್ನಡವೂ ಸಹ ಒಂದು.
‘ನಾಡು’ ಎಂದರೆ,
ಒಂದು ಬೌಗೋಳಿಕ ಸೀಮೆ
ಎಂದು. ‘ನುಡಿ’ ಎಂದರೆ, ಅಭಿವ್ಯಕ್ತಿಗೆ, ಹಾಗುತನ್ನಂತಿರುವ ಜೀವಿಯೊಡನೆ ಸಂವಾಹನಕ್ಕಾಗಿ ಬಳಸುವ ಮಾಧ್ಯಮ ಎಂದು.
ಇಂತಹ ಮಾಧ್ಯಮಗಳಲ್ಲಿ ಒಂದು
ದ್ರಾವಿಡ ಭಾಷೆಗಳಲ್ಲಿ ಬಹಳ
ಹಳೆಯದರಲ್ಲಿ ಒಂದಾದ ಕನ್ನಡ
ಭಾಷೆ. ಇಂದು ವಿವಿಧ
ರೂಪಗಳಲ್ಲಿ ಸುಮಾರು ೪೫
ದಶಲಕ್ಷ ಜನರು ಆಡುನುಡಿಯಾಗಿ ಬಳಸುತ್ತಿದ್ದಾರೆ.
ನಮ್ಮ
‘ಕನ್ನಡ’
ಭಾಷೆಯು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಒಂದು ಬೌಗೋಳಿಕ
ಎಲ್ಲೆಯೊಳಗೆ ಜನರು ಹೊಂದಿರುವ ಸಂಸ್ಕೃತಿ ಉಳಿಯ ಬೇಕೆಂದರೆ ಆ ಎಲ್ಲೆಯೊಳಗಿನ ಭಾಷೆ
ಅಸ್ತಿತ್ವದಲ್ಲಿರಲೇಬೇಕು. ಕನ್ನಡ ಭಾಷೆ
ಇಂದು ಇಂಗ್ಲೀಷಿನ ವ್ಯಾಪಕ
ಬಳಕೆಯಿಂದಾಗಿ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಈ ಪ್ರಬಂಧದಲ್ಲಿ ಕನ್ನಡ ನಾಡ ನುಡಿಯ
ರಕ್ಷಣೆ,
ಸವಾಲು ಮತ್ತು ವಿವಿಧ
ಕ್ಷೇತ್ರಗಳಲ್ಲಿ ಕನ್ನಡದ ಬಳಕೆಯ
ಬಗ್ಗೆ ಬರೆಯಲಾಗಿದೆ.
ಕನ್ನಡ, ಕರುನಾಡು ಇತ್ತೀಚಿನದೆ?
ಕನ್ನಡ
ನುಡಿಯನ್ನು ಆಡುಮಾತಾಗಿ ೨೫೦೦
ವರ್ಷಗಳಿಂದ ಬಳಸಲಾಗುತ್ತಿದೆ. ಕನ್ನಡ ಲಿಪಿ
ಮತ್ತು ಬರೆಯುವ ಪದ್ಧತಿ
ಸುಮಾರು ೧೯೦೦ ವರ್ಷಗಳ
ಹಿಂದೆಯೇ ಇದ್ದಿತು. ಇನ್ನು
ಕರುನಾಡು ಯಾವಾಗಿನಿಂದ ಇದೆ
ನೀವೆ ಊಹಿಸಿಕೊಳ್ಳಿ. ಹಳೆಯ ಇಂಗ್ಲೀಷ್ ಭಾಷೆ ಸುಮಾರು ಕ್ರಿ.ಶ. ೧೦೦೦
ರಲ್ಲಿ ಜನರಿಂದ ಬಳಸಲ್ಪಡುತ್ತಿತ್ತು. ಬರಹದಲ್ಲಿ ಇಂಗ್ಲೀಷ್ ಪ್ರಭುದ್ಧಮಾನಕ್ಕೆ ಬಂದಿದ್ದು ಎಷ್ಟೋ
ವರ್ಷಗಳು ಕಳೆದ ಬಳಿಕ.
ನಡು ಇಂಗ್ಲೀಷ್ ಕ್ರಿ.ಶ. 1400 ರಲ್ಲಿ
ಆಡು ಮತ್ತು ಬರಹದ
ರೂಪದಲ್ಲಿ ಬಳಸಲ್ಪಟ್ಟಿತು. ಆಧುನಿಕ
ಇಂಗ್ಲೀಷ್ ೧೫ ಅಥವಾ
೧೬ ನೆ ಶತಮಾನದಿಂದೀಚೆಗೆ ಬಹುತೇಕ ರಾಷ್ಟ್ರಗಳಲ್ಲಿ ಜನರಿಂದ ವ್ಯವಹಾರಕ್ಕಾಗಿ, ಜ್ಞಾನಕ್ಕಾಗಿ, ತಾಂತ್ರಿಕ ಕಾರಣಗಳಿಗಾಗಿ, ಆಡಳಿತಕ್ಕಾಗಿ, ಮತ್ತು ಪರಸ್ಪರ ಸಂಬಂಧಹೊಂದುವ ಸಲುವಾಗಿ ಬಳಸಲ್ಪಡುತ್ತಿದೆ.
ಕನ್ನಡದ
ಬಗ್ಗೆ ಹೇಳುವುದಾದರೆ, ಕನ್ನಡವು ದಕ್ಷಿಣ ಭಾರತದ
ಭಾಷೆಗಳ ಮೂಲವೆಂದು ಗುರುತಿಸಲ್ಪಟ್ಟಿರುವ ಮೂಲದ್ರಾವಿಡದಿಂದ ಯಾವಾಗ ಆಡುಭಾಷೆಯಾಗಿ ಪರಿವರ್ತಿತವಾಯಿತೆಂದು ಖಚಿತವಾಗಿ ಹೇಳಲು ಅಸಾಧ್ಯ. ತಮಿಳು
ಭಾಷೆಯು ದ್ರಾವಿಡ ಭಾಷೆಯಿಂದ ಬೇರ್ಪಟ್ಟ ಸಮಯದಲ್ಲಿಯೇ ಕನ್ನಡವು
ಕೂಡ ಆಡುಭಾಷೆಯಾಗಿ ಬೇರ್ಪಟ್ಟಿತೆಂದು ಹೇಳಲಾಗುತ್ತದೆ.
ಈ
ಭಾಷೆಯ ಲಿಪಿಯು ಸುಮಾರು
೧೫೦೦-೧೬೦೦ ವರ್ಷಗಳಿಗಿಂತಲೂ ಹಳೆಯದು. ಐದನೆಯ ಶತಮಾನದ
ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತು. ಲಿಪಿಯ ಉಗಮದ
ಇತಿಹಾಸವನ್ನು ಗಮನಿಸಿದರೆ, ತಮಿಳಿಗಿಂತಲೂ ಕನ್ನಡದ
ಲಿಪಿಯೇ ಮೊದಮೊದಲಿಗೆ ಹೆಚ್ಚು
ಪ್ರವರ್ಧಮಾನಕ್ಕೆ ಬಂದಂತೆ ಕಾಣಿಸುತ್ತದೆ. ಕುಮುದೇಂದು ಮುನಿ ರಚಿಸಿದ
‘ಸಿರಿಭೂವಲಯ’
ಗ್ರಂಥದಲ್ಲಿ ಕನ್ನಡ ಭಾಷೆಗೆ
ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆ
ಎಂದು ಸಾಭೀತುಪಡಿಸಿದ್ದಾರೆ. ಆದರೆ, ಅವರ ಗ್ರಂಥವನ್ನು ಜನ ಸಾಮಾನ್ಯರಿಗೆ ದೊರಕುವ
ಹಾಗೆ ಸರ್ಕಾರ ಗಮನಹರಿಸಿಲ್ಲ. ಕನ್ನಡ ವೇದಗಳ ಕಾಲದಿಂದಲೂ ಬಳಕೆಯಲ್ಲಿದ್ದಿತು ಹಾಗೂ ಅದು
ನಾಡ ರಕ್ಷಣೆಯ ಸಲುವಾಗಿ
ಗುಪ್ತ ಭಾಷೆಯಾಗಿ ಬಳಕೆಯಾಗಿತ್ತೆಂದು ಕೆಲವು
ಶಾಸನಗಳಲ್ಲಿ ಉಲ್ಲೇಖವಾಗಿದೆ.
ಈಗ ಕನ್ನಡ
ಪ್ರಪಂಚದಲ್ಲಿ ಅದೆಷ್ಟೋ ಭಾಷೆಗಳು ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಅಂತೆಯೆ ಕನ್ನಡವೂ
ಸಹ ಇಂಗ್ಲೀಷ್ ವ್ಯಾಮೋಹಿ ಕನ್ನಡಿಗರಿಂದ ನಿರಾಕರಿಸಲ್ಪಡುತ್ತಿದೆ. ಕನ್ನಡದ ರಕ್ಷಣೆ
ಕೇವಲ ಹಳ್ಳಿಗರದು ಎಂಬ
ಗೊಡ್ಡು ಮಾತು ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿ ಓದಿದವರ
ಹಾಗೂ ಓದುತ್ತಿರುವವರಿಂದ ಹೊರಹೊಮ್ಮುತ್ತಿದೆ. ಕನ್ನಡವನ್ನು ಅನ್ನದ
ಭಾಷೆಯಾಗಿಸಲು ಕೇವಲ ಕೆಲವೆ
ಜನರು ಪ್ರಯತ್ನಿಸುತ್ತಿದ್ದಾರೆ. ಕನ್ನಡದ ಪರ
ಹೋರಾಟಗಾರರು ಎಂದು ಸೋಗು
ಹಾಕಿರುವವರು ಕೇವಲ ಚಳುವಳಿಗಳನ್ನು ಮಾತ್ರ ಮಾಡಿಕೊಂಡು ಕನ್ನಡದ
ಉಳಿವಿಗೆ ಮಾಡಬೇಕಾದ್ದನ್ನು ಮಾಡದೆ ವ್ಯರ್ಥವಾಗಿ ಇತರರ ಪ್ರಯತ್ನವನ್ನು ಹಾಳು
ಗೆಡವುತ್ತಿದ್ದಾರೆ.
೧೯೬೩ರ
ಅಕ್ಟೋಬರ್ ೧೦ ರಂದು
ಕರ್ನಾಟಕ ರಾಜ್ಯಭಾಷಾ ಅಧಿನಿಯಮವನ್ನು ಸರ್ಕಾರ ಜಾರಿಮಾಡಿತು. ಆದರೆ, ಸಮರ್ಪಕವಾಗಿ ಕನ್ನಡ ಇನ್ನೂ
ಆಡಳಿತ ಭಾಷೆಯಾಗಿಲ್ಲ. ಬ್ರಿಟೀಷರುಕನ್ನಡಕ್ಕೆ ನೀಡುತ್ತಿದ್ದ ಆಧ್ಯತೆಯನ್ನು ಇಂದಿನ ಸರ್ಕಾರ
ನೀಡುತ್ತಿಲ್ಲ. ವ್ಯವಹಾರಿಕವಾಗಿ ಕನ್ನಡವನ್ನು ಬಳಸುವುದನ್ನು ಜನರು ದಿನದಿಂದ ದಿನಕ್ಕೆ
ಕಡಿಮೆಮಾಡುತ್ತಿದ್ದಾರೆ. ಉದ್ಯೋಗದ ಕಾರಣಗಳಿಗಾಗಿ, ಬಹುತೇಕ
ಜನರು ಇಂಗ್ಲೀಷನ್ನೆ ಅನ್ನದ
ಭಾಷೆಯಾಗಿಸಿಕೊಳ್ಳುತ್ತಿದ್ದಾರೆ.
ಭವಿಷ್ಯದ ಆತಂಕ
ಇಂಗ್ಲೀಷ್ ಜಗತ್ತಿನ ಭಾಷೆಯಾಗಿದ್ದೇ ಇಂಗ್ಲೀಷ್ಗರ ಆಕ್ರಮಣಕಾರಿ ನೀತಿಯಿಂದ. ಮೊದಲು
ಅಮೇರಿಕದಲ್ಲಿ ಇಂಗ್ಲೀಷ್ ಭಾಷೆಯೇ
ಇರಲಿಲ್ಲ. ಕಾಲಾಂತರದಲ್ಲಿ ಬ್ರಿಟೀಷರ ಅಧಿಕಾರಶಾಹಿ ಹಾಗೂ ವಸಾಹತುಶಾಹಿ ನೀತಿಯಿಂದಾಗಿ ಇಂದು ಅಮೇರಿಕಾದಲ್ಲಿ ಇಂಗ್ಲೀಷ್ ಜನರ ನಾಡಿಯಾಗಿದೆ. ಒಂದು ವೇಳೆ ಕನ್ನಡವನ್ನು ಬಳಸದೇ ಹೋದಲ್ಲಿ ಇಂಗ್ಲೀಷ್ ಭಾಷೆಯೆ ಭವಿಷ್ಯದಲ್ಲಿ ನಮ್ಮ
ಭಾಷೆಯಾಗುವ ಮೂಲಕ ನಮ್ಮ
ನಾಡು ಬ್ರಿಟನ್ ಅಥವಾ
ಅಮೇರಿಕ ದೇಶಗಳರಾಜ್ಯಗಳ ಪಟ್ಟಿಯಲ್ಲಿ ಸೇರುವುದರಲ್ಲಿ ಯಾವ ಸಂಶಯ
ಬೇಡ. ಈ ನಾಡು
ಇಂಗ್ಲೀಷ್ ಮಯವಾದರೆ,ಕನ್ನಡದಲ್ಲಿರುವ ಜನಪದ ಸಾಹಿತ್ಯಗಳನ್ನು ವಸ್ತುಸಂಗ್ರಹಾಲಯಗಳಲ್ಲಿ ನೋಡುವಂತಾಗುತ್ತದೆ.ಈಗಾಗಲೆ, ಈ ರೀತಿಯ
ಸಾಹಿತ್ಯಗಳು ಕಣ್ಮರೆಯಾಗುತ್ತಿದ್ದು ಪಾಪ್ ಗೀತೆಗಳು ಜನಪದದ
ಸ್ಥಾನವನ್ನು ಆಕ್ರಮಿಸುತ್ತಿದೆ.
ರಕ್ಷಣಾತ್ಮಕ ಕಾರ್ಯಗಳು
ನಾಡು
ಉಳಿಯಬೇಕೆಂದರೆ ಭಾಷೆ ಉಳಿಯಬೇಕು. ಭಾಷೆ ಉಳಿಯಬೇಕೆಂದರೆ, ನಾವು ಪಡೆದುಕೊಂಡ ಜ್ಞಾನವನ್ನು ಕನ್ನಡಕ್ಕಾಗಿ ಮೀಸಲಿಡಬೇಕು. ನಮ್ಮ ಭಾಷೆ ಮೊದಲು
ಕನ್ನಡವಾಗಿ ನಂತರ ಇತರೆ
ಭಾಷೆಯಾಗಿರಬೇಕು. ಕನ್ನಡದಲ್ಲಿ ಲಭ್ಯವಿರದ್ದನ್ನು ಲಭ್ಯವಾಗುವ ಹಾಗೆ ನಮ್ಮ
ಕೌಶಲ್ಯ ಹಾಗೂ ಸಾಮರ್ಥ್ಯ ರೂಪುಗೊಳ್ಳಬೇಕು. ಇದಕ್ಕಾಗಿ ಕನ್ನಡಿಗರಾದವರು ಅನಿವಾರ್ಯವಾಗಿ ಬೇರೆ ಭಾಷೆಯಲ್ಲಿ ಶಿಕ್ಷಣವನ್ನು ಪಡೆದರೂ ಸಾಮರ್ಥ್ಯವನ್ನು ಗಳಿಸಿದ ಮೇಲೆ ಕನ್ನಡದ
ಬಳಕೆಯ ವಿಸ್ತರಣೆಗೆ ಅವಶ್ಯವಿರುವ ಕೆಲಸವನ್ನು ಮಾಡಬೇಕು.
ಉದಾ:
ಒಬ್ಬ ವ್ಯಕ್ತಿ ಕಂಪ್ಯೂಟರ್ ಶಿಕ್ಷಣವನ್ನು ಇಂಗ್ಲೀಷ್ ಭಾಷೆಯಲ್ಲಿ ಪಡೆದು ಉದ್ಯೋಗಕ್ಕೆ ಸೇರುವುದು ಅನಿವಾರ್ಯವೇ ಆದರು, ಕನ್ನಡದಲ್ಲಿ ತಾನು
ಇಂಗ್ಲೀಷ್ ಭಾಷೆಯಲ್ಲಿ ಪಡೆದ
ಕಂಪ್ಯೂಟರ್ ಶಿಕ್ಷಣವನ್ನು ಕನ್ನಡದಲ್ಲೂ ಲಭ್ಯವಾಗುವ ಹಾಗೆ ಆತ
ಮಾಡಬೇಕು.
ಇಂದು
ವಿಜ್ಞಾನ,
ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಹೆಚ್ಚು ಇಂಗ್ಲೀಷ್ ಭಾಷೆಯೆ ಬಳಕೆಯಾಗುತ್ತಿದೆ. ನಂತರದ ಸ್ಥಾನಗಳಲ್ಲಿ, ಫ್ರೆಂಚ್, ಜರ್ಮನ್, ರಷ್ಯನ್
ಮತ್ತು ಇತರೆ ಭಾಷೆಗಳು
ಬಳಸಲ್ಪಡುತ್ತಿದೆ. ನಮ್ಮ ಕನ್ನಡ
ಉಳಿಯಬೇಕೆಂದರೆ ನಮ್ಮ ಪ್ರಯತ್ನವು ಸಹ ಕನ್ನಡ ಮುಖಿಯಾಗಿರಬೇಕು. ಸೈನಿಕರು ನಾಡ ರಕ್ಷಣೆಗೆ ದುಡಿದರೆ,
ಆಯಾ ಭಾಷಿಕರು ಆಯಾ
ಭಾಷೆಯನ್ನು ರಕ್ಷಿಸುವ ಸಲುವಾಗಿ
ದುಡಿಯಬೇಕು. ‘ಭಾರತಕರ್ನಾಟಕ’ ದ ನಿವಾಸಿಯಾಗಿ ಮನಸ್ಸು ಇಂಗ್ಲೀಷ್ ಆಗಿರಬಾರದು. ಬದಲಾಗಿ ನಾಡ ನಿವಾಸಿಯಾಗಿ ‘ಕನ್ನಡ’
ದ ಮನಸ್ಸಾಗಿರಬೇಕು. ಬೇರೆ ಭಾಷೆಗಳನ್ನು ಗೌರವಿಸಬೇಕು ಹಾಗು ನಮ್ಮನ್ನು ನಾವು ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ತಾಂತ್ರಿಕವಾಗಿ, ಸಾಹಿತ್ಯಾತ್ಮಕವಾಗಿ, ಆಡಳಿತಾತ್ಮಕವಾಗಿ, ಹೀಗೆ ಮುಂತಾದ
ಕ್ಷೇತ್ರಗಳಲ್ಲಿ ಕನ್ನಡ ನಾಡನುಡಿಯ ಉಳಿವಿಗಾಗಿ ತೊಡಗಿಸಿಕೊಳ್ಳಬೇಕು.
ಕೊನೆಯ ಮಾತು
ಕಣ್ಣಿಗೆ
ಕಾಡಿಗೆ ಬೇಕುಕಾಡಿಗೆ ಮರ-ಗಿಡ-ಬಳ್ಳಿ, ಪ್ರಾಣಿ-ಪಕ್ಷಿ ಬೇಕು
ಮರ-ಗಿಡ-ಬಳ್ಳಿ, ಪ್ರಾನಿ-ಪಕ್ಷಿಗಳಿಗೆ ನೀರು-ಗಾಳಿ-ಬೆಳಕು
ಬೇಕು ನೀರು-ಗಾಳಿ-ಕಾಡು-ನೆಲದ
ರಕ್ಷಣೆಗೆ ಮಾನವನ ಪರಿಸರಾತ್ಮಕ ಬದುಕು ಬೇಕು ನಮ್ಮಅಭಿವ್ಯಕ್ತಿ-ಸಾಂಸ್ಕೃತಿಕ-ಆಡಳಿತ-ಸಾಹಿತ್ಯ-ತಾಂತ್ರಿಕ ಜ್ಞಾನ ಹೀಗೆ
ಮುಂತಾದ ‘ಆತ್ಮಕ’ ವುಗಳಿಗೆ ಏನು
ಬೇಕು?
‘ಕನ್ನಡ ನಾಡ ನುಡಿ’ ಎಂಬ ಆತ್ಮ ಬೇಕು.ವಿಷಯ ಸಂಗ್ರಹಣೆ ತಿಳಿಯಲು ಕೆಳಗಿನ ಲಿಂಕ್ ಗಳನ್ನು ಬಳಸಿ:
ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹನೀಯರು
ಕನ್ನಡ ಕವಿಗಳು
ಸಮಂತ ಭದ್ರ·
ಶಿವಕೋಟ್ಯಾಚಾರ್ಯ·
ಪಂಪ·
ರನ್ನ·
ಪೊನ್ನ·
ಜನ್ನ·
ಪುಲಿಗೆರೆ ಸೋಮನಾಥ·
ಮಧುರ ಚೆನ್ನ·
ಹರಿಹರ (ಕವಿ)·
ರಾಘವಾಂಕ·
ಲಕ್ಷ್ಮೀಶ·
ಕುಮಾರವ್ಯಾಸ·
ನಯಸೇನ·
ಶಾ೦ತಕವಿ·
ಭೀಮಕವಿ·
ಅಸಗ·
ಗುಣನಂದಿ·
ಕೇಶಿರಾಜ·
ಜೇಡರ ದಾಸಿಮಯ್ಯ·
ವಾದಿರಾಜರು·
ಪುರ೦ದರದಾಸ·
ಕನಕದಾಸ·
ಬಸವಣ್ಣ·
ಅಕ್ಕಮಹಾದೇವಿ·
ಅಲ್ಲಮಪ್ರಭು·
ಸರ್ವಜ್ಞ·
ಸಂಚಿ ಹೊನ್ನಮ್ಮ·
ಸಿಂಗರಾರ್ಯ·
ಆನಂದಕಂದ·
ಭಟ್ಟಾಕಳಂಕ·
ನಾಗವರ್ಮ-೧·
ನಾಗವರ್ಮ-೨·
ಗೋವಿಂದ ಪೈ·
ಆಲೂರುವೆಂಕಟರಾಯರು·
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆ೦ಪು)·
ದ.ರಾ.ಬೇಂದ್ರೆ·
ಮಾಸ್ತಿ·
ಶಿವರಾಮ ಕಾರ೦ತ·
ವಿ.ಕೃ.ಗೋಕಾಕ್·
ಯು.ಆರ್.ಅನಂತಮೂರ್ತಿ·
ಗಿರೀಶ್ ಕಾರ್ನಾಡ್·
ಚಂದ್ರಶೇಖರ ಕಂಬಾರ·
ಜಿ.ಪಿ.ರಾಜರತ್ನಂ·
ಮಹಾದೇವಿವರ್ಮಾ·
ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ·
ಡಿ.ಜೆ.ಮಂಜುನಾಥ್·
ಗೊರೂರು ರಾಮಸ್ವಾಮಿ ಐಯ್ಯಂಗಾರ·
ಚಂದ್ರಶೇಖರ ಪಾಟೀಲ·
ಡಿ.ವಿ.ಜಿ·
ಶಿಶುನಾಳ ಶರೀಫ·
ಆರ್.ಸಿ ಹಿರೇಮಠ·
ಕೆ.ಎಸ್.ನಿಸಾರ್ ಅಹಮದ್·
ಡಿ.ಎಲ್.ನರಸಿಂಹಾಚಾರ್·
ಪು.ತಿ.ನರಸಿಂಹಾಚಾರ್·
ಕೆ.ಎಸ್.ನರಸಿಂಹಸ್ವಾಮಿ·
ಕೊಡಗಿನ ಗೌರಮ್ಮ·
ತ್ರಿವೇಣಿ·
ಅ.ನ.ಕೃಷ್ಣರಾಯ·
ಬಿ.ಎಂ.ಶ್ರೀಕಂಠಯ್ಯ·
ಬಿ. ಜಿ. ಎಲ್. ಸ್ವಾಮಿ·
ಎಸ್.ಎಲ್.ಭೈರಪ್ಪ·
ಪೂರ್ಣಚಂದ್ರ ತೇಜಸ್ವಿ·
ಪಿ.ಲಂಕೇಶ್·
ಎಂ.ಕೆ.ಇಂದಿರ·
ಆರ್ಯಾಂಬಪಟ್ಟಾಭಿ·
ವಾಣಿ·
ಮಂಗಳಾಸತ್ಯನ್·
ಉಷಾನವರತ್ನರಾಮ್·
ಅನುಪಮಾನಿರಂಜನ·
ಸಾ ರ ಅಬೂಬಕ್ಕರ್·
ಹೆಚ್.ಜಿ.ರಾಧಾದೇವಿ·
ಕಮಲಾ ಹಂಪನಾ·
ಶ್ರೀನಿವಾಸ ವೈದ್ಯ
ಕನ್ನಡ ಸಾಹಿತಿಗಳು
ಶಿವಕೋಟ್ಯಾಚಾರ್ಯ·
ಪಂಪ·
ರನ್ನ·
ಪೊನ್ನ·
ಜನ್ನ·
ಪುಲಿಗೆರೆ ಸೋಮನಾಥ·
ಮಧುರ ಚೆನ್ನ·
ಹರಿಹರ (ಕವಿ)·
ರಾಘವಾಂಕ·
ಲಕ್ಷ್ಮೀಶ·
ಕುಮಾರವ್ಯಾಸ·
ನಯಸೇನ·
ಶಾ೦ತಕವಿ·
ಭೀಮಕವಿ·
ಅಸಗ·
ಗುಣನಂದಿ·
ಕೇಶಿರಾಜ·
ಜೇಡರ ದಾಸಿಮಯ್ಯ·
ವಾದಿರಾಜರು·
ಪುರ೦ದರದಾಸ·
ಕನಕದಾಸ·
ಬಸವಣ್ಣ·
ಅಕ್ಕಮಹಾದೇವಿ·
ಅಲ್ಲಮಪ್ರಭು·
ಸರ್ವಜ್ಞ·
ಸಂಚಿ ಹೊನ್ನಮ್ಮ·
ಸಿಂಗರಾರ್ಯ·
ಆನಂದಕಂದ·
ಭಟ್ಟಾಕಳಂಕ·
ನಾಗವರ್ಮ-೧·
ನಾಗವರ್ಮ-೨·
ಗೋವಿಂದ ಪೈ·
ಆಲೂರುವೆಂಕಟರಾಯರು·
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆ೦ಪು)·
ದ.ರಾ.ಬೇಂದ್ರೆ·
ಮಾಸ್ತಿ·
ಶಿವರಾಮ ಕಾರ೦ತ·
ವಿ.ಕೃ.ಗೋಕಾಕ್·
ಯು.ಆರ್.ಅನಂತಮೂರ್ತಿ·
ಗಿರೀಶ್ ಕಾರ್ನಾಡ್·
ಚಂದ್ರಶೇಖರ ಕಂಬಾರ·
ಜಿ.ಪಿ.ರಾಜರತ್ನಂ·
ಮಹಾದೇವಿವರ್ಮಾ·
ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ·
ಡಿ.ಜೆ.ಮಂಜುನಾಥ್·
ಗೊರೂರು ರಾಮಸ್ವಾಮಿ ಐಯ್ಯಂಗಾರ·
ಚಂದ್ರಶೇಖರ ಪಾಟೀಲ·
ಡಿ.ವಿ.ಜಿ·
ಶಿಶುನಾಳ ಶರೀಫ·
ಆರ್.ಸಿ ಹಿರೇಮಠ·
ಕೆ.ಎಸ್.ನಿಸಾರ್ ಅಹಮದ್·
ಡಿ.ಎಲ್.ನರಸಿಂಹಾಚಾರ್·
ಪು.ತಿ.ನರಸಿಂಹಾಚಾರ್·
ಕೆ.ಎಸ್.ನರಸಿಂಹಸ್ವಾಮಿ·
ಕೊಡಗಿನ ಗೌರಮ್ಮ·
ತ್ರಿವೇಣಿ·
ಅ.ನ.ಕೃಷ್ಣರಾಯ·
ಬಿ.ಎಂ.ಶ್ರೀಕಂಠಯ್ಯ·
ಬಿ. ಜಿ. ಎಲ್. ಸ್ವಾಮಿ·
ಎಸ್.ಎಲ್.ಭೈರಪ್ಪ·
ಪೂರ್ಣಚಂದ್ರ ತೇಜಸ್ವಿ·
ಪಿ.ಲಂಕೇಶ್·
ಎಂ.ಕೆ.ಇಂದಿರ·
ಆರ್ಯಾಂಬಪಟ್ಟಾಭಿ·
ವಾಣಿ·
ಮಂಗಳಾಸತ್ಯನ್·
ಉಷಾನವರತ್ನರಾಮ್·
ಅನುಪಮಾನಿರಂಜನ·
ಸಾ ರ ಅಬೂಬಕ್ಕರ್·
ಹೆಚ್.ಜಿ.ರಾಧಾದೇವಿ·
ಕಮಲಾ ಹಂಪನಾ·
ಶ್ರೀನಿವಾಸ ವೈದ್ಯ
ಕನ್ನಡ ಸಾಹಿತಿಗಳು
Nice
ReplyDeleteಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
ReplyDeletejayakumarcsj@gmail.com
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
ReplyDeletejayakumarcsj@gmail.com
Niminda ವಿದ್ಯಾರ್ಥಿಗಳಿಗೆ thumba help agide thankyou
ReplyDeleteಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
ReplyDeletejayakumarcsj@gmail.com